ಚಿಕ್ಕೋಡಿ(ಫೆ. ೧೫, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮನುಷ್ಯನ ಜೀವನದಲ್ಲಿ ಹಣ ಮುಖ್ಯವಲ್ಲ. ಆರೋಗ್ಯ ಮುಖ್ಯ. ಆದರೆ ಇವತ್ತು ಹಣದ ಬೆನ್ನು ಹತ್ತಿ ಆರೋಗ್ಯವನ್ನು ಕೆಡಿಸಿಕೊಂಡಿದ್ದೇವೆ ಎಂದು ಚಿಕ್ಕೋಡಿಯ ಸಂಪಾದನ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಸೋಮವಾರ ಜರುಗಿದ ಪಾಂಡುರಂಗ ಕುಂಬಾರ ಹಾಸ್ಪಿಟಲ್ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ವೈದ್ಯರ ಪಾತ್ರ ಬಹಳಷ್ಟು ಮುಖ್ಯ. ವೈದ್ಯಕೀಯ ವೃತ್ತಿ ಉದ್ಯೋಗ ಅಲ್ಲ ಸಮಾಜ ಸೇವೆ. ನಾಗರಮುನ್ನೋಳಿಯಂತಹ ಹಳ್ಳಿಯಲ್ಲಿ ಲಕ್ವಾ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಕೆಲಸ ಮಾಡುತ್ತ ಎಂ ಬಿ ಕುಂಬಾರ (ಡಾ. ಮಹಾರುದ್ರಪ್ಪ ಬ. ಕುಂಬಾರ) ಇಂದು 4-5 ರಾಜ್ಯದಲ್ಲಿ ಪ್ರಸಿದ್ಧಿ ಹೊಂದಿದ್ದಾರೆ ಎಂದರು.
ಪಾಂಡುರಂಗ ಕುಂಬಾರ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ಘಾಟಿಸಿದ ಚಿಂಚಣಿಯ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಇವತ್ತು ಜೀವನದಲ್ಲಿ ಶ್ರೀಮಂತರಾಗುವ ತನಕ ಮಾತ್ರ ದೇವರನ್ನು ಆರಾಧಿಸುತ್ತಾರೆ. ಹಣ ಬಂದಕೂಡಲೇ ದೇವರನ್ನು ಮರೆತು ಬಿಡುತ್ತಾರೆ. ಆದರೆ ನಾಗರಮುನ್ನೋಳಿಯ ಡಾ. ಎಂ.ಬಿ.ಕುಂಬಾರ ಇವರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಪಾಂಡುರಂಗನ ಪ್ರಸಾದ ನೀಡಿ ನಂತರ ಉಳಿದ ಚಿಕಿತ್ಸೆ ನೀಡುತ್ತಾರೆ. ತಾವು ನಿರ್ಮಿಸಿದ ದೊಡ್ಡ ಆಸ್ಪತ್ರೆಗೆ ಪಾಂಡುರಂಗ ಹಾಸ್ಪಿಟಲ್ ಎಂದು ಹೆಸರು ಇಟ್ಟಿರುವದು ಶ್ಲಾಘನೀಯವಾದದ್ದು, ಇಂದಿನ ದಿನಮಾನದಲ್ಲಿ ನೀಜವಾದ ದೇವರು ವೈದ್ಯರು ಎಂದರು.
ನೂಲದ ಸುರಗೀಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊಳಿಗುಡ್ಡದ ಯಲ್ಲಾಲಿಂಗ ಮಹಾರಾಜರು, ಅಂಬಳನೂರಿನ ಸಂಗಮೇಶ್ವರ ದೇವರು ಸಾನಿಧ್ಯವಹಿಸಿದ್ದರು. ಡಾ. ಎಸ್.ಆರ್.ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯ ವವನ ಕತ್ತಿ, ಹಿರಾಶುಗರ ನಿರ್ದೇಶಕ ಸುರೇಶ ಬೆಲ್ಲದ, ರಾಮಾ ಮಾನೆ, ಶ್ಯಾಮ ರೇವಡೆ, ಗ್ರಾ.ಪಂ ಅಧ್ಯಕ್ಷ ಸಿದ್ದಪ್ಪಾ ಮರ್ಯಾಯಿ, ಡಾ. ಉಮೇಶ ಕುಂಬಾರ, ಗೋಪಾಲ ಕುಂಬಾರ, ವಿನಾಯಕ ಎಮ್. ಕುಂಬಾರ, ರಾವಸಾಹೇಬ ಪಾಟೀಲ, ದಾನಪ್ಪಾ ಕೊಟಬಾಗಿ, ಮಹಾದೇವ ಚೌಗಲಾ, ಡಾ. ಎಮ್.ವ್ಹಿ.ಪಾವುಸ್ಕರ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ಆಲೂರಿ, ದುಂಡಪ್ಪಾ ಕೋಟೆಪ್ಪಗೋಳ, ಗಣಪತಿ ಕುಂಬಾರ, ಮಲಗೌಡ ನೇರ್ಲಿ, ಬಸವಲಿಂಗಪ್ಪ ಕುಂಬಾರ, ವೀರುಪಾಕ್ಷಿ ಈಟಿ, ಮಾರುತಿ ಮರ್ಯಾಯಿ, ಮಹಾದೇವ ಈಟಿ, ಶಿವಪುತ್ರ ಮನಗೂಳಿ, ಶೀತಲ ಖೇಮಲಾಪೂರೆ ಮುಂತಾದವರು ಉಪಸ್ಥಿರಿದ್ದರು. ರಾಜು ಕುಂಬಾರ ಸ್ವಾಗತಿಸಿದರು. ಸುಭಾಷ ಸಂಕಪಾಳ ಪ್ರಾರ್ಥಿಸಿದರು. ಚಂದ್ರಶೇಖರ ಅರಬಾವಿ ನಿರೂಪಿಸಿದರು. ಎಂ.ಡಿ.ಬಡಿಗೇರ ವಂದಿಸಿದರು.