ಬೆಂಗಳೂರು(ಫೆ.೧೪, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಭವಿಷ್ಯದ ಯುವ ನಾಯಕರನ್ನು ರೂಪಿಸುವ ಉದ್ದೇಶದಿಂದ ಪ್ರತಿಷ್ಠಿತ ದೈನಿಕಗಳಾದ ಟೈಮ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ಫೆಡರಲ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸ್ಪೀಕ್ ಫಾರ್ ಇಂಡಿಯಾ’ ಅಂತರ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಹಾವೇರಿಯ ಪ್ರವೀಣ್ ಕುಂಬಾರ್ “ಜನಪ್ರಿಯ ಮಾತುಗಾರ” (Most popular speaker) ಎಂಬ ಪ್ರಶಸ್ತಿ ಗೆದ್ದಿದ್ದಾರೆ.
ದ ಟೈಮ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ಫೆಡರಲ್ ಬ್ಯಾಂಕ್ ಸಹಯೋಗದಲ್ಲಿ ಪ್ರತಿವರ್ಷ ಅಂತರ ಕಾಲೇಜು ಚರ್ಚಾ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಭವಿಷ್ಯದ ಯುವ ನಾಯಕರನ್ನು ರೂಪಿಸುವ ದೇಶದ ಅತಿ ದೊಡ್ಡ ಚರ್ಚಾ ಸ್ಪರ್ಧೆ ಇದಾಗಿದೆ. ಸಮಕಾಲೀನ ವಿಚಾರಗಳ ಬಗ್ಗೆ ಯುವಜನತೆಯ ಅಭಿಪ್ರಾಯಗಳ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸುವ ಮತ್ತು ಪ್ರೋತ್ಸಾಹ ನೀಡುವ ಚರ್ಚಾ ಸ್ಪರ್ಧೆಯಾಗಿದೆ. ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲಿ ಚರ್ಚಾಗೋಷ್ಠಿ ನಡೆಸಲಾಗುತ್ತದೆ.
ಧಾರವಾಡದ ಸಿಎಸ್ಐ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ ಅಭ್ಯಾಸ ಮಾಡುತ್ತಿರುವ ಪ್ರವೀಣ ಕುಂಬಾರ ಅವರು ಈ ವರ್ಷದ ಚರ್ಚಾಗೋಷ್ಠಿಯಲ್ಲಿ ಕರ್ನಾಟಕ ವಿಭಾಗದಿಂದ ಆಯ್ಕೆಯಾಗಿದ್ದರು. ಸ್ಪರ್ಧೆಯಲ್ಲಿ ತಮ್ಮ ಗಟ್ಟಿ ಧ್ವನಿಯನ್ನು ಎತ್ತಿ ಸಮಕಾಲೀನ ವಿಷಯಗಳ ಬಗ್ಗೆ ನಿರ್ಗಳವಾಗಿ ಚರ್ಚಿಸಿ ಕರ್ನಾಟಕದ ಅಗ್ರ 25 ಮಾತುಗಾರರಲ್ಲಿ ಒಬ್ಬರಾಗಿ ಆಯ್ಕೆಗೊಂಡಿದ್ದ ಅವರು ಅಂತಿಮ ಸುತ್ತಿನಲ್ಲಿ ಜನಪ್ರೀಯ ಮಾತುಗಾರ ನಾಗಿ ಮೂಡಿ ಬಂದಿದ್ದಾರೆ. ಕುಂಬಾರ್ ಅವರು ಅಂತಿಮ ಸುತ್ತನ್ನು ತಲುಪಲು ಮತ್ತು ಗೆಲ್ಲಲು ಆನ್ ಲೈನ್ ಮತದಾನ ಚಲಾಯಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.