ಮಂಗಳೂರು(ಫೆ.೧೦, ಕುಲಾಲ್ ವರ್ಲ್ಡ್ ಡಾಟ್ ಕಾಮ್) ಸಾಮಾಜಿಕ ತಾಣಗಳಲ್ಲಿ ಕುಲಾಲ ಸಮಾಜದ ಬಡ ರೋಗಿಗಳ, ಅಶಕ್ತರ ಬಗ್ಗೆ ಬರಹಗಳನ್ನು ಬರೆಯುವ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ಹಣ ಸಂಗ್ರಹಿಸಿ ನೆರವು ನೀಡುವುದರ ಮೂಲಕ ನಿಸ್ವಾರ್ಥವಾಗಿ ಬಡ ರೋಗಿಗಳ ಸೇವೆಯಲ್ಲಿ ತೊಡಗಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಪ್ರಾಯೋಜಿತ `ಕುಲಾಲ್ ವರ್ಲ್ಡ್’ ಪುರುಷ ಮತ್ತು ಮಹಿಳಾ ವಾಟ್ಸಪ್ ಗ್ರೂಪಿನ ಸದಸ್ಯರು ಸೇರಿ ಎರಡು ಅಶಕ್ತ ಬಡ ಕುಟುಂಬಗಳಿಗೆ ಒಟ್ಟು 63 ಸಾವಿರ ರೂ. ನೆರವು ನೀಡಿ ಸ್ಥೈರ್ಯ ತುಂಬಿದೆ.
ಬೆಂಕಿ ಆಕಸ್ಮಿಕದಲ್ಲಿ ತಮ್ಮ ಮನೆಯನ್ನು ಕಳೆದುಕೊಂಡ ಬೈಕಂಪಾಡಿ ಕೇಶವ ಮೂಲ್ಯ ಹಾಗೂ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿದ್ದ ಬಂಟ್ವಾಳ ಮೂಡ ಗ್ರಾಮದ ಗಾಂದೋಡಿ ಎಂಬಲ್ಲಿಯ ದಿ. ವೆಂಕಪ್ಪ ಮೂಲ್ಯ ಅವರ ಅವರ ಪತ್ನಿ ಲಲಿತಾ ಮೂಲ್ಯ ಅವರ ದೀನ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ನೆರವು ನೀಡುವಂತೆ ವಿನಂತಿಸಿತ್ತು. ಇದಕ್ಕೆ ಸ್ಪಂದಿಸಿರುವ `ಕುಲಾಲ್ ವರ್ಲ್ಡ್’ ವಾಟ್ಸಪ್ ಮಿತ್ರರು ತಂಡದ ಸದಸ್ಯ ಅರುಣ್ ಕುಲಾಲ್ ಮೂಳೂರು ಹಾಗೂ ಗ್ರೂಪ್ ಅಡ್ಮಿನ್ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರ ನೇತೃತ್ವದಲ್ಲಿ ಸಹೃದಯಿ ದಾನಿಗಳಿಂದ ಹಣ ಸಂಗ್ರಹ ನಡೆಸಿತ್ತು.
ಅದರಂತೆ ಒಟ್ಟು 63,000 ರೂ. ಸಂಗ್ರಹಗೊಂಡಿದ್ದು, ಇದರಲ್ಲಿ 40 ಸಾವಿರ ರೂ. ಕೇಶವ ಮೂಲ್ಯರಿಗೆ ಹಾಗೂ ಉಳಿದ 23 ಸಾವಿರ ರೂ.ಲಲಿತಾ ಮೂಲ್ಯ ಕುಟುಂಬಕ್ಕೆ ಫೆ.೧೦ರಂದು ಮಂಗಳೂರು ಪೊಲೀಸ್ ಲೇನ್ ನಲ್ಲಿರುವ ಶ್ರೀದೇವಿ ದೇವಸ್ಥಾನದಲ್ಲಿ ಹಸ್ತಾ೦ತರ ಮಾಡಲಾಯಿತು. ಹಣ ಸಂಗ್ರಹದ ಮಧ್ಯೆ ಕ್ಯಾನ್ಸರ್ ಖಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಲಿತಾ ಮೂಲ್ಯ ಅವರು ರೋಗ ಉಲ್ಬಣಿಸಿ ಜ. ೨೪ರಂದು ಮೃತಪಟ್ಟಿದ್ದು, ಇವರ ಪುತ್ರ ವಿನೋದ್ ಅವರು ಧನಸಹಾಯದ ಚೆಕ್ ಸ್ವೀಕರಿಸಿದರು.
ಇದೇ ವೇಳೆ ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವತಿಯಿಂದ ಕೇಶವ ಮೂಲ್ಯ ಅವರಿಗೆ ಹೆಚ್ಚುವರಿಯಾಗಿ 6,000 ರೂ. ನೆರವು ನೀಡಿ ಮಾನವೀಯತೆ ಮೆರೆದರು.
ಧನಸಹಾಯದ ಚೆಕ್ ವಿತರಣೆ ವೇಳೆ ಸಂದರ್ಭ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ನರೇಶ್ ಕೆ.ಟಿ ಬೆಳ್ತಂಗಡಿ ಹಾಗೂ ಸದಸ್ಯರಾದ ಅರುಣ್ ಕುಲಾಲ್ ಮೂಳೂರು, ಕಿರಣ್ ಕುಲಾಲ್ ಮರಕಡ, ರಮೇಶ್ ಕುಮಾರ್ ವಗ್ಗ, ನಿತೇಶ್ ಕುಕ್ಯಾನ್ ಏಳಿಂಜೆ, ಉದಯ್ ಕುಲಾಲ್ ಕಳತ್ತೂರು, ದಿನೇಶ್ ಕುಲಾಲ್ ಬೀಡು, ಪ್ರಸಾದ್ ಕುಲಾಲ್ ಸಿದ್ಧಕಟ್ಟೆ, ಸಂದೇಶ್ ಕುಲಾಲ್, ಧನುಷ್ ರಾಜ್ ಕುಲಾಲ್, ಪ್ರಕಾಶ್ ಕುಲಾಲ್, ಉಮೇಶ್ ಕುಲಾಲ್, ಮಹಿಳಾ ಗ್ರೂಪ್ ನ ಸದಸ್ಯರಾದ ವೈಶಾಲಿ ಕುಲಾಲ್, ಚಂದ್ರಪ್ರಭಾ, ಶೃತಿ ಕುಲಾಲ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.