ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕೆ.ಆರ್. ಪುರ ಸಮೀಪದ ಹೊಯ್ಸಳ ನಗರದಲ್ಲಿ ರಾಷ್ಟ್ರೀಯ ಕ್ಲಾಸಿಕಲ್ ಡಾನ್ಸ್ ಅಕಾಡೆಮಿ ಸಹಯೋಗದೊಂದಿಗೆ ನೃತ್ಯಶ್ರೀ ಡಾನ್ಸ್ ಅಕಾಡೆಮಿಯ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷೆ ಸ್ವಾತಿ ಪಿ ಭಾರದ್ವಾಜ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ನೃತ್ಯ ಆಸಕ್ತರಿಗೆ ತರಬೇತಿಗೊಳಿಸಿ ಉತ್ತಮ ತರಬೇತಿ ನೀಡುತ್ತಿರುವುದು ಪ್ರಶಂಸನೀಯ. ಇಡೀ ಭಾರತವನ್ನೆಲ್ಲ ಆಕ್ರಮಿಸಿರುವ ಭರತನಾಟ್ಯ ಕಲೆ. ಭರತಮುನಿಯ ಭರತನಾಟ್ಯ ಮಾತ್ರವಲ್ಲ, ಇಡೀ ಭಾರತದ ನೃತ್ಯ ಕಲೆಯನ್ನು ಪ್ರತಿನಿಧಿಸುವ ಅದ್ಬುತ ಪಾರಂಪಾರಿಕ ಕಲೆಯಾಗಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಭರತನಾಟ್ಯ ಕಲೆಯನ್ನು ಕಲಿಸಿದರೆ ಅವರು ಮುಂದಿನ ದಿನಗಳಲ್ಲಿ ಉತ್ತಮ ಪಟುವನ್ನು ಕಲಿಯುತ್ತಾರೆ ಎಂದರು.
ಕೆ.ಆರ್.ಪುರ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕಲ್ಕೆರೆ ಜಿ ಮಾದೇಶ್ ಗೌಡ, ಭರತನಾಟ್ಯ ಪ್ರತಿಭೆ ರಾಜ್ಯ ಸಾಂಸ್ಕೃತಿಕ ವಲಯಕ್ಕೆ ಅತ್ಯುತ್ತಮ ಕೊಡುಗೆ. ನಮ್ಮ ಕನ್ನಡ ನಾಡಿನ ಸಾಂಪ್ರದಾಯಿಕ ಸಂಸ್ಕ್ರತಿಕ ಕಲೆಯನ್ನು ಅನಾವರಣಗೊಳಿಸಲು ತರಬೇತಿ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಮಕ್ಕಳು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಉತ್ತಮವಾಗಿ ಕಲಿತು ನಾಡಿನ ಭವ್ಯ ಪರಂಪರೆಯನ್ನು ಪ್ರದರ್ಶಿಸಿ ನಾಡಿಗೆ ಕೀರ್ತಿ ತನ್ನಿ ಎಂದರು. ನೃತ್ಯಶ್ರೀ ಭಾರತನಾಟ್ಯ ಕಲಾ ಕೇಂದ್ರದಿಂದ ಸಮೂಹ ನೃತ್ಯ ಪ್ರದರ್ಶನ ನಡೆಯಿತು.
ನಮ್ಮ ಕನ್ನಡ ನಾಡಿನ ಸಾಂಪ್ರದಾಯಿಕ ಸಂಸ್ಕ್ರತಿಕ ಕಲೆಯನ್ನು ಅನಾವರಣಗೊಳಿಸಲು ತರಬೇತಿ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಮಕ್ಕಳು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಉತ್ತಮವಾಗಿ ಕಲಿತು ನಾಡಿನ ಭವ್ಯ ಪರಂಪರೆಯನ್ನು ಪ್ರದರ್ಶಿಸಿ ನಾಡಿಗೆ ಕೀರ್ತಿ ತನ್ನಿ ಎಂದರು.
ನೃತ್ಯಶ್ರೀ ಭಾರತನಾಟ್ಯ ಕಲಾ ಕೇಂದ್ರದಿಂದ ಸಮೂಹ ನೃತ್ಯ ಪ್ರದರ್ಶನ ನಡೆಯಿತು.ಚಿಕ್ಕ ವಯಸ್ಸಿನ ಮಕ್ಕಳು ತಮ್ಮ ಪ್ರಬುದ್ಧವಾದ ಮತ್ತು ಸಂಪೂರ್ಣ ಹಿಡಿತದ ಭರತನಾಟ್ಯ ಹೆಜ್ಜೆಗಳ ಮೂಲಕ ನೆರೆದಿದ್ದ ಕಲಾಸಕ್ತರಿಂದ ಪ್ರಶಂಸೆ ಪಡೆದರು. ಕಾರ್ಯಕ್ರಮದಲ್ಲಿ ನೃತ್ಯಶ್ರೀ ಅಕಾಡೆಮಿಯ ಸಂಸ್ಥಾಪಕಿ ಸಂಧ್ಯಾ ಅಶೋಕ ಮೂಲ್ಯ, ಸಹ ಸಂಸ್ಥಾಪಕ ಅಶೋಕ್ ಮೂಲ್ಯ, ಕೆ.ಆರ್.ಪುರ ಜಯಕರ್ನಾಟಕ ಸಂಘಟನೆಯ ಪ್ರದಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇದ್ದರು.