ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಶ್ರಯದಲ್ಲಿ ಕುಂಬಾರಿಕೆಗೆ ಸರಕಾರದ ಕಾರ್ಮಿಕ ಇಲಾಖೆ ಮತ್ತು ದೇವರಾಜ್ ಅರಸು ನಿಗಮದಿಂದ ಸಿಗುವ ಸವಲತ್ತುಗಳ ಕುರಿತು ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾಹಿತಿ ಕಾರ್ಯಾಗಾರ ಜರುಗಿತು. ಸಂಘದ ಅಧ್ಯಕ್ಷ ಕೃಷ್ಣ ಎ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ವಿಲ್ಮಾ ಎಲಿಜಬೆತ್, ಹಿರಿಯ ಪತ್ರಕರ್ತ ಚಿಂದಂಬರ ಬೈಕಂಪಾಡಿ, ಕರಾವಳಿ ಕುಲಾಲ ಯುವ ವೇದಿಕೆಯ ಸ್ಥಾಪಕ ಡಾ. ಅಣ್ಣಯ್ಯ ಕುಲಾಲ್, ಕಾರ್ಮಿಕ ಇಲಾಖೆ ನಿರೀಕ್ಷಕ ವೀರಣ್ಣ ಕುಂಬಾರ, ಹರೀಶ್ ಕುಂಬಾರ, ಮೇರಿ ಮುಂತಾದವರು ಹಾಜರಿದ್ದು ಸಂವಾದದಲ್ಲಿ ಭಾಗವಹಿಸಿ, ಕಾರ್ಯಾಗಾರದಲ್ಲಿ ಭಾಗವಹಿಸಿದವರ ಸಂದೇಹ ಗಳಿಗೆ ಉತ್ತರಿಸಿದರು. ಕುಲಾಲ ಮಹಿಳಾ ಮಂಡಳಿಯ ಸದಸ್ಯರು ಪ್ರಾರ್ಥಿಸಿದರು, ರಮೇಶ್ ಕುಲಾಲ್ ಸ್ವಾಗತಿಸಿದರು, ಸುರೇಶ್ ಕುಲಾಲ್ ವಂದಿಸಿದರು ಸಂಘದ ಕಾರ್ಯದರ್ಶಿ ಪ್ರಸಾದ್ ಸಿದ್ದಕಟ್ಟೆ ಕಾರ್ಯಕ್ರಮವನ್ನ ಸಂಯೋಜಿಸಿ ನಿರೂಪಿಸಿದರು.
—————-ಕಾರ್ಯಾಗಾರದ ಮುಖ್ಯಾಂಶಗಳು———————
ಕಾರ್ಮಿಕ ಇಲಾಖೆಯ ಅಧಿಕಾರಿ ವಿಲ್ಮಾ ಎಲಿಜಬೆತ್ :
- ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕ ನೆಲೆಯಲ್ಲಿ ಕುಂಬಾರರಿಗೆ ಮೊದಲಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ತದನಂತರ ಎರಡನೇ ಹಂತದಲ್ಲಿ ವಂತಿಗೆ ಆಧರಿತ ವಿಮಾ ಸೌಲಭ್ಯ ನೀಡುವ ಬಗ್ಗೆ ಸರಕಾರ ಚಿಂತಿಸುತ್ತಿದೆ. ಇದು ಹೊಸ ಯೋಜನೆ ಆಗಿರುವುದರಿಂದ ಕುಂಬಾರ ಸಂಘಟನೆಗಳಿಂದ ಸರಕಾರಕ್ಕೆ ಒತ್ತಡ ಬಿದ್ದಲ್ಲಿ ಮತ್ತಷ್ಟು ಸರಳವಾಗಿ ಬಡ ಕುಂಬಾರರಿಗೆ ವಿಮಾ ಸೌಲಭ್ಯ ಸಿಗಬಹುದು.
- ಮಡಿಕೆ ಮಾಡುವ ಕುಂಬಾರರನ್ನ ಅವರ ಕೌಶಲ್ಯ ವನ್ನ ಗುರುತಿಸಲು ಪ್ರತೀ ಜಿಲ್ಲೆಯಲ್ಲಿ 11 ಶ್ರಮ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದ್ದು. ಅದರಲ್ಲಿ ಒಂದು ವಿಶೇಷ ಪ್ರಶಸ್ತಿ ಮತ್ತು ಉಳಿದ 10 ಪುರಸ್ಕಾರಗಳು ಅದಕ್ಕೆ ಪ್ರತೀ ಜಿಲ್ಲೆಯಲ್ಲಿ ಕುಂಬಾರರು ಅರ್ಜಿ ಹಾಕಬೇಕು. ಅದಲ್ಲದೇ ಡ್ರೈವರ್ಸ್ ಗಳಿಗೆ ರೆಡ್ ಕ್ರಾಸ್ ಜೊತೆ ಸೇರಿ ಪ್ರಥಮ ಚಿಕಿತ್ಸ ತರಬೇತಿ ಮತ್ತು ಭತ್ಯೆ ಕೊಡಲಾಗುವುದು.
- ದೇವರಾಜು ಅರಸು ನಿಗಮದಿಂದ ಕುಂಬಾರ ಗುಡಿ ಕೈಗಾರಿಕಾ ಬ್ಯಾಂಕ್ ಗಳಿಂದ ಮಾತ್ರ(ಸಹಕಾರಿ ಬ್ಯಾಂಕ್ ಅಲ್ಲ) ಸ್ವಯಂ ಉದ್ಯೋಗ ಸಮುದಾಯ ಸಾಲ ಮತ್ತು ವೈಯಕ್ತಿಕ ಸಾಲ ಕಡಿಮೆ ಬಡ್ಡಿ ಮತ್ತು ಸಬ್ಸಿಡಿ ಜೊತೆ ಸಿಗುತ್ತದೆ. ಕಿರು ಸಾಲ ಸೌಲಭ್ಯ, ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ, ಗಂಗಾ ಕಲ್ಯಾಣ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಕೊಳವೆ ಬಾವಿ ಯೋಜನೆ ಮುಂತಾದ ಸೌಲಭ್ಯ ಸಿಗುತ್ತದೆ.
ಡಾ. ಅಣ್ಣಯ್ಯ ಕುಲಾಲ್ :
- ಸರಕಾರ ಕುಂಬಾರರಿಗೆ ಸವಲತ್ತನ್ನು ವಿವಿಧ ಇಲಾಖೆಯಲ್ಲಿ ತುಂಡರಿಸಿ ಮಾಡಿಕೊಡುವ ಬದಲು ಕುಂಭನಿಗಮ ಮಾಡಿ ಅದರ ಮೂಲಕವೇ ಎಲ್ಲ ಸೌಲಭ್ಯವನ್ನೂ ಕೊಡಬೇಕಾಗಿದೆ. ಕಾರ್ಮಿಕ ಇಲಾಖೆ. ಖಾದಿ ಗ್ರಾಮೋದ್ಯೋಗ ಇಲಾಖೆ, ದೇವರಾಜ್ ಅರಸು ಇಲಾಖೆ ಹೀಗೆ ಹಲವು ಇಲಾಖೆಯ ಮೂಲಕ ತುಂಡು ತುಂಡು ಮಾಡಿ ಕೊಡುವುದರಿಂದ ಕುಂಬಾರಿಗೆ ನೇರವಾಗಿ ತಲುಪಬೇಕಾದ ಹಣ ಸಿಗದೇ, ಇನ್ಯಾರದ್ದೋ ಮೂಲಕ ಸಿಗುವಾಗ ಸವಲತ್ತು ಪೋಲಾಗುತ್ತಿದೆ. ಅದರ ಬದಲಿಗೆ ಸ್ವತಂತ್ರ ಕುಂಭ ನಿಗಮ ಮಾಡಿ ಅದಕ್ಕೆ ಕುಂಬಾರರನ್ನೇ ಅಧ್ಯಕ್ಷ ಮಾಡಿದಲ್ಲಿ ಸೌಲಭ್ಯ ನೇರವಾಗಿ ಕುಂಬಾರರಿಗೆ ಮುಟ್ಟಿ ಹಣ ಪೋಲಾಗುವುದು ನಿಲ್ಲುತ್ತದೆ ಇದನ್ನು ಅಧಿಕಾರಿಗಳು ಸರಕಾರದ ಗಮನಕ್ಕೆ ತಂದು ಕುಂಬಾರರಿಗೆ ನ್ಯಾಯಕೊಡಿಸಬೇಕು.
- ಸರಕಾರಗಳ ಗಮನ ಸೆಳೆಯಬೇಕಾದರೆ ರಾಜ್ಯದಲ್ಲಿ ಇರುವ ನೂರಾರು ಸಂಘಟನೆಗಳು ಒಟ್ಟಾಗಿ ಒಂದು ಕುಂಬಾರ ಸಂಘಟನೆಗಳ ಒಕ್ಕೂಟ/ ಫೆಡರೇಶನ್ ಮಾಡಿ ಅದರ ಮೂಲಕ ಸರಕಾರಗಳನ್ನ ಗಟ್ಟಿ ಧ್ವನಿಯಲ್ಲಿ ತಿವಿಯಬೇಕು, ರಾಜ್ಯಕ್ಕೆ ಮಾದರಿ ಎಂಬಂತೆ ಕುಲಾಲ್ ಕುಂಬಾರ ಯುವವೇಧಿಕೆಯ ದಶಮಾನೋತ್ಸವದ ಅಂಗವಾಗಿ ಜರುಗಲಿರುವ ಕುಂಭ ಮೇಳ ಮತ್ತು ಕುಂಭ ಕ್ರೀಡಾ ಕೂಟದಲ್ಲಿ ಕರಾವಳಿ ಮಲೆನಾಡು ಸೇರಿದಂತೆ ರಾಜ್ಯ ಹಾಗು ಇನ್ನಿತರ ಭಾಗಗಳ ಸಮಾನ ಮನಸ್ಕ ಸಂಘಟನೆಗಳ ಕುಲಾಲ್ ಕುಂಬಾರ ಸಂಘಟನೆಗಳ ಒಕ್ಕೂಟಕ್ಕೆ ಚಾಲನೆ ಕೊಟ್ಟು, ಆ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲೆ ಒತ್ತಡ ತರಲಾಗುವುದು.
- ನಮ್ಮ ಕುಂಭಾರರು ಅಧಿಕಾರಿ ಗಳ ಕಚೇರಿಗೆ ಹೋದಾಗ ಬಡವರಾದ ಅವರನ್ನು ಟೇಬಲ್ ನಿಂದ ಟೇಬಲ್ ಗೆ, ಕಚೇರಿಯಿಂದ ಕಚೇರಿಗೆ ಅಲೆಸಿ ಸತಾಯಿಸಬಾರದು. ಆಗ ನಾಯಕರು ಕಚೇರಿಗೆ ಬಂದು ತರಾಟೆಗೆ ತೆಗೆದುಕೊಳ್ಳುವ ಅವಕಾಶ ಬರದಂತೆ ನೋಡಿಕೊಳ್ಳಬೇಕು.
- ಸಂಘದ ಅಧ್ಯಕ್ಷರಾದ ಅನುಭವೀ ಕೃಷ್ಣ ನವರು ಇಂತಹ ಕಾರ್ಯಕ್ರಮ ಏರ್ಪಡಿಸಿ ಉತ್ತಮ ಜನಜಾಗೃತಿ ಕೆಲಸ ಮಾಡಿದ್ದಾರೆ. ಜಾತಿ ಸಂಘಗಳು ಹುಟ್ಟಿಕೊಂಡಿದ್ದೇ ಕುಲ ಕಸುಬಾದ ಕುಂಬಾರಿಕೆಯನ್ನು ಉಳಿಸಿ ಬೆಳೆಸಲು, ಬಡವರಿಗೆ ಶೈಕ್ಷಣಿಕ ಆರ್ಥಿಕ ಶಕ್ತಿ ತುಂಬಿ ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳೆಸಲು. ಇದಕ್ಕೆ ಸಂಘ ಗಳು ಪ್ರಥಮ ಆಧ್ಯತೆ ಕೊಡಬೇಕು. ಇತ್ತೀಚಿಗೆ ನಮ್ಮ ಆದ್ಯ ತೆ ಬ್ಯಾಂಕ್ ಮತ್ತು ಧಾರ್ಮಿಕತೆಯತ್ತ ವಾಲುತ್ತಿರುವುದು ಸಂಘಗಳ ಮೂಲ ಉದ್ದೇಶವನ್ನ ಕಡೆಗಣಿಸಿದಂತಾಗುತ್ತಿದೆ.
- ಈಗಾಗಲೇ ಪ್ರಯೋಗಾತ್ಮಕವಾಗಿ ಉತ್ತರ ಪ್ರದೇಶದ ಎರಡು ರೈಲ್ವೆ ಸ್ಟೇಷನ್ ಗಳಲ್ಲಿ ಕುಂಬಾರರ ಮಡಿಕೆ ಕುಡಿಕೆ ತಟ್ಟೆಗಳನ್ನು ಬಳಸುವಂತೆ ಸರಕಾರ ಆದೇಶ ಕೊಟ್ಟಿದೆ. ಕುಂಬಾರ ಸಂಘಟನೆಗಳ ಒಕ್ಕೂಟದ ಮೂಲಕ ಅದನ್ನು ರಾಷ್ಟ್ರದ ಎಲ್ಲಾ ರೈಲ್ವೆ ಸ್ಟೇಷನ್ ಗಳಿಗೆ ವಿಸ್ತರಿಸಬೇಕು ಹಾಗು ಮಡಿಕೆಗಳನ್ನ ನೇರವಾಗಿ ಕುಂಬಾರರಿಂದಲೇ ಖರೀದಿಸಿ ಕುಂಬಾರಿಕೆಗೆ ಒತ್ತು ಕೊಡಬೇಕು.
ಚಿದಂಬರ ಬೈಕಂಪಾಡಿ :
ಇಲಾಖೆ ಅಧಿಕಾರಿಗಳು ಈ ಸವಲತ್ತನ್ನು ಹೆಚ್ಚು ಕುಂಬಾರರಿಗೆ ಮುಟ್ಟಿಸಬೇಕಾದರೆ ಪೇಟೆಯಲ್ಲಿ ಕಾರ್ಯಾಗಾರ ಮಾಡಿದಂತೆ, ಬಡ ಕುಂಬಾರರು ಬದುಕುತ್ತಿರುವ ಕುಂಬಾರ ಕೇರಿ ಅಥವಾ ಬಡಾವಣೆಗೆ ತೆರಳಿ ಇಂತಹ ಕಾರ್ಯಾಗಾರ ಮಾಡಬೇಕು. ಅದಕ್ಕೆ ಕುಂಬಾರ ಸಂಘಗಳು ಯುವ ವೇಧಿಕೆಗಳು ಕುಂಬಾರ ಗುಡಿಕೈಗಾರಿಕಾ ಸಂಘಗಳು ಕೈ ಜೋಡಿಸಬೇಕು. ಆಗ ಇದು ಹೆಚ್ಚು ಪರಿಣಾಮಕಾರಿಯಾಗುತ್ತದೆ.