ಪುಣೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪುಣೆ ಕುಲಾಲ ಸುಧಾರಕ ಸಂಘದ ನೂತನ ಅಧ್ಯಕ್ಷರಾಗಿ ಹರೀಶ್ ಕುಲಾಲ್ ಮುಂಡ್ಕೂರು ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿ ಸಭೆಯು ಕಾತ್ರಜ್ ವಂಡರ್ ಸಿಟಿಯಲ್ಲಿರುವ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ 2019 -2021ನೇ ಸಾಲಿಗೆ ನೂತನ ಸಮಿತಿಯನ್ನು ಸಭೆಯಲ್ಲಿ ಆಯ್ಕೆ ಮಾಡಿ ಘೋಷಿಸಲಾಯಿತು. ಹರೀಶ್ಕುಲಾಲ್ ಮುಂಡ್ಕೂರು ಇವರನ್ನು ಸಂಘದ ಅಧ್ಯಕ್ಷರನ್ನಾಗಿ ಸರ್ವಾನು ಮತದಿಂದ ಪುನರಾಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ವಿಶ್ವನಾಥ್ ಉಡುಪಿ, ಉಪಾಧ್ಯಕ್ಷ ರಾಗಿ ದೊಡ್ಡಣ್ಣ ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಬಂಟ್ವಾಳ್ ಹಾಗು ಕೋಶಾಧಿಕಾರಿ ಯಾಗಿ ವಾಸು ಕುಲಾಲ್ ಅವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ಅನಿಲ್ ಕುಲಾಲ್, ಜೊತೆ ಕೋಶಾಧಿಕಾರಿಯಾಗಿ ನಾಗೇಶ್ ಕುಲಾಲ್, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮನೋಜ್ ಸಾಲ್ಯಾನ್ ಅವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿಗೆ ರಮೇಶ್ ಕೊಡ್ಮನ್ಕರ್, ವಾಸುದೇವ್ ಬಂಟ್ವಾಳ್, ಕುಟ್ಟಿ ಮೂಲ್ಯ, ಸದಾಶಿವ ಮೂಲ್ಯ, ದಾಮೋದರ ಮೂಲ್ಯ, ಸುರೇಂದ್ರ ಮೂಲ್ಯ, ಸುಂದರ್ ಮೂಲ್ಯ, ರಮೇಶ್ ಕುಲಾಲ್, ಹರೀಶ್ ಡಿ. ಮೂಲ್ಯ ಮತ್ತು ಸಮಿತಿ ಸದಸ್ಯರುಗಳಾಗಿ ಕಾರ್ತಿಕ್ ಕುಲಾಲ್, ದೀಪಕ್ ಕುಲಾಲ್, ಶಿವಪ್ರಸಾದ್ ಕೊಡ್ಮನ್ಕರ್, ವಿಠಲ್ ಎಸ್. ಮೂಲ್ಯ, ಸಂದೀಪ್ ಮೂಲ್ಯ ಅವರನ್ನು ಸಮಿತಿಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶಾರದಾ ಕೆ. ಮೂಲ್ಯ ಅವರನ್ನು ಆಯ್ಕೆ ಮಾಡಲಾಯಿತು. ಉಪ ಕಾರ್ಯಾಧ್ಯಕ್ಷೆಯರುಗಳಾಗಿ ಯಶೋದಾ ಮೂಲ್ಯ ಮತ್ತು ಜಯಂತಿ ಮೂಲ್ಯ, ಕಾರ್ಯದರ್ಶಿಯಾಗಿ ಸರಸ್ವತಿ ಸಿ. ಮೂಲ್ಯ, ಕೋಶಾಧಿಕಾರಿಯಾಗಿ ಭಾಗ್ಯಶ್ರೀ ಮೂಲ್ಯ, ಜನ ಸಂಪರ್ಕಾ ಧಿಕಾರಿಯಾಗಿ ಸುಜಾತಾ ಆರ್. ಕುಲಾಲ್, ಕ್ರೀಡಾ ಸಂಯೋಜಕಿಯಾಗಿ ಅನಿತಾ ಕೊಡ್ಮನ್ಕರ್, ಸದಸ್ಯರುಗಳಾಗಿ ನಿಶಾ ಮೂಲ್ಯ, ರೂಪಾಲಿ ವಿ. ಮೂಲ್ಯ ಅವರುಗಳನ್ನು ಆಯ್ಕೆ ಮಾಡಿ ಘೋಷಿಸಲಾಯಿತು.
ಚುನಾಯಿತರಾದ ನೂತನ ಸಮಿತಿ ಸದಸ್ಯರುಗಳಿಗೆ ಅಧ್ಯಕ್ಷರಾದ ಹರೀಶ್ ಕುಲಾಲ್ ಅವರು ಅಭಿನಂದನೆ ಸಲ್ಲಿಸಿದರು. ನವೀನ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.