ಕುಂಬಾರ ಸಮುದಾಯ ಒಗ್ಗಟ್ಟಾಗಲಿ : ಸಾಹಿತಿ ಕುಂ.ವೀರಭದ್ರಪ್ಪ
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್ ): ಹರಿದು ಹಂಚಿಹೋಗಿರುವ ಕುಂಬಾರ ಸಮುದಾಯ ಒಗ್ಗಟ್ಟಾಗಬೇಕೆಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ನಗರದಲ್ಲಿ ಅಖೀಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ವತಿಯಿಂದ ನಡೆದ ಕುಂಬಾರ ಸಮುದಾಯದ ವಧು-ವರಾನ್ವೇಷಣಾ ಸಮಾವೇಶ ಮತ್ತು 2019ರ ಡೈರಿ, ಕ್ಯಾಲೆಂಡರ್ ಹಾಗೂ ಕುಂಭ ಉದಯ ಪತ್ರಿಕೆ ಪುನರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯ ಪಡೆಯಲು, ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯಲು ಒಗ್ಗಟ್ಟು ಪ್ರದರ್ಶನ ಬಹಳ ಮುಖ್ಯ ಎಂದರು. ಕುಂಬಾರ ಸಮುದಾಯದಲ್ಲಿ ಶಾಲಿವಾಹನ, ಶೆಟ್ಟಿ, ಚಕ್ರಶಾಲಿ, ಕುಲಾಲ್ ಮುಂತಾದ ಒಳ ಪಂಗಡಗಳಿದ್ದು, ಇವೆಲ್ಲವೂ ಒಗ್ಗಟ್ಟಾಗಿ ಹಿಂದೂ ಕುಂಬಾರ ಎಂದು ಹೊಸದಾಗಿ ಹೆಸರನ್ನಿಟ್ಟರೆ ಸಮುದಾಯ ಸಂಘಟನೆಯಾಗಿ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಚೀನ ಈಜಿಪ್ಟ್ ನಾಗರಿಕತೆ ಬೆಳಕಿಗೆ ಬರಲು ಪ್ರಮುಖವಾಗಿ ಅಲ್ಲಿ ದೊರೆತ ಮಣ್ಣಿನ ಮಡಕೆಯ ಚೂರುಗಳೇ ಕಾರಣ. ಅಂದಿನ ದಿನದಿಂದಲೂ ಸಮುದಾಯ ಜಗತ್ತಿಗೆ ಕೊಡುಗೆ ನೀಡುತ್ತಲೇ ಬಂದಿದೆ. ಕುಂಬಾರ ಕಂಡುಹಿಡಿದ ಚಕ್ರವೇ ಇಂದು ವಿಷ್ಣುವಿನ ಕೈಯಲ್ಲೂ ಇದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನಪ್ರಿಯ ಶಾಸಕರಾದ ಎಸ್.ಟಿ ಸೋಮಶೇಖರ್ ಮಾತನಾಡಿ ವಧು ವರರ ಮುಖಾಮುಖಿ ಭೇಟಿಯಾಗುವುದಕ್ಕೆ ಮತ್ತು ಹೊಸ ಹೊಸ ಸಂಬಂಧಗಳು ಬೆಸೆಯುವುದಕ್ಕೆ ಈ ಸಮಾವೇಶ ಸಹಕಾರಿಯಾಗಿದೆ ಎಂದು ಭಾವಿಸುತ್ತೇವೆ. ದಯವಿಟ್ಟು ಎಲ್ಲಾ ಕುಂಬಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶುಭ ಸಮಾವೇಶ ಉಪಯೋಗವನ್ನು ಪಡೆದುಕೊಂಡು ಬಾಂಧವ್ಯಗಳನ್ನು ವಿಸ್ತರಿಸಿಕೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತೇನೆ ಎಂದು ತಿಳಿಸಿದರು.
ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಶ್ರೀ ತಿಪ್ಪೇಸ್ವಾಮಿ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ವೇಳೆ ಶ್ಯಾಮಸುಂದರ್ ಸಂಪಾದಕತ್ವದ “ಕುಂಭ ಉದಯ’ ಪತ್ರಿಕೆ ಬಿಡುಗಡೆ ನಡೆಯಿತು. ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟ್ ಸಂಸ್ಥಾಪಕರಾದ ಆರ್.ಶ್ರೀನಿವಾಸ್, ಉಪಾಧ್ಯಕ್ಷರಾದ ಬಿ.ಎಲ್.ಮಂಜುನಾಥ್, ಕಾರ್ಯದರ್ಶಿ ಎಲ್.ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಮುನಿಸ್ವಾಮಿ ಒಡೆಯರ್, ಖಜಾಂಚಿ ಗಿರೀಶ್ ಮತ್ತಿತರರಿದ್ದರು.
ಟ್ರಸ್ಟ್ ನಿರ್ದೇಶಕ ಕೆ.ದಕ್ಷಿಣಾಮುರ್ತಿ, ಮ್ಯಾನೇಜಿಂಗ್ ಟ್ರಸ್ಟ್, ಕ್ರೆಡಿಟ್ ಐ ಮೈಸೂರು ಡಾ.ಎಂ.ಪಿ ವರ್ಷ, ವೆಂಕಟಾಚಲಯ್ಯ, ವೈದ್ಯಕೀಯ ನಿರ್ದೇಶಕಿ ಅಂಬುಜಾಕ್ಷಿ , ಬಿಜೆಪಿ ಮಹಿಳಾ ಮೋರ್ಚೆ ರಾಜ್ಯ ಕಾರ್ಯದರ್ಶಿ ಪ್ರೆಮಮಲೀಲಾ ವೆಂಕಟೇಶ್, ಟ್ರಸ್ಟ್ ಉಪಾಧ್ಯಕ್ಷರಾದ ಬಿ.ಎಲ್.ಮಂಜುನಾಥ್, ಕಾರ್ಯದರ್ಶಿ ಎಲ್.ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಮುನಿಸ್ವಾಮಿ ಒಡೆಯರ್, ಖಜಾಂಚಿ ಗಿರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.