ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ.ಕ.ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಸಂದರ್ಭ ಕುಲಾಲ ಸಮಾಜ ಬಾಂಧವರ ಪರವಾಗಿ ಸಮರ್ಪಿಸಲು ಉದ್ದೇಶಿಸಿರುವ ಶ್ರೀ ಮಹಾಗಣಪತಿ ಮತ್ತು ಶ್ರೀ ಮಹಾಕಾಳಿ ದೇವರ ಗುಡಿಯ ದಾರಂದ ಮತ್ತು ಬಾಗಿಲಿಗೆ ರಜತ ಕವಚ/ಹೊದಿಕೆಗೆ ಸಂಬಂಧಿಸಿ ಜ.13ರಂದು ಸಮಾಲೋಚನಾ ಸಭೆ ಕರೆಯಲಾಗಿದೆ.
ಜೀರ್ಣೋದ್ದಾರದ ಸಂದರ್ಭ ರಜತ ಕವಚ/ಹೊದಿಕೆಗೆ ಸಂಬಂಧಿಸಿ ಶ್ರೀ ಪೊಳಲಿ ರಾಜರಾಜೇಶ್ವರಿ ಸೇವಾ ಸಮಿತಿಯನ್ನು ರಚಿಸಿದ್ದು , ಈ ಫಲವಾಗಿ ಕುಲಾಲ ಸಮಾಜದ ಅರ್ಪಣಾ ಮನೋಭಾವ ಹಾಗು ತನು ಮನ ಧನದ ಸಂಪೂರ್ಣ ಸಹಕಾರದೊಂದಿಗೆ ಸರಿ ಸುಮಾರು 26 ಲಕ್ಷ ರೂ. ವೆಚ್ಚದ ದಾರಂದ ಹಾಗೂ ಬಾಗಿಲಿನ ರಜತ ಕವಚದ ತಯಾರಿಯ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಕುಲಾಲ ಸಮಾಜದ ಈ ಭಕ್ತಿಯ ಕೊಡುಗೆಯನ್ನು ಶ್ರೀ ಕ್ಷೇತ್ರಕ್ಕೆ ಸಮರ್ಪಿಸುವ ಸಲುವಾಗಿ ಸಮಾಲೋಚನೆಯನ್ನು ನಡೆಸಲು ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಸ್ಥಾನದ ಸರ್ವಮಂಗಳ ಸಭಾಭವನದಲ್ಲಿ ಅಂದು ಬೆಳಿಗ್ಗೆ 9:30ಕ್ಕೆ ಸಭೆಯನ್ನು ಏರ್ಪಡಿಸಲಾಗಿದ್ದು. ಸಭೆಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿಪ್ರಮೀಳಾ ಮಾಣೂರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9845625914 ಸಂಪರ್ಕಿಸಬಹುದು.