ದೋಹಾ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿದೇಶದಲ್ಲಿದ್ದರೂ ತಮ್ಮ ನಾಡಿನ ಸಮಾಜದ ಅಶಕ್ತ ಕುಟುಂಬಗಳಿಗೆ ಸತತವಾಗಿ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿರುವ `ದೋಹಾ ಕುಲಾಲ್ಸ್’ ಈ ತಿಂಗಳಲ್ಲಿ ಮೂರು ರೋಗಿಗಳಿಗೆ ಒಟ್ಟು 75 ಸಾವಿರ ರೂ. ಧನಸಹಾಯ ನೀಡಿದೆ.
ದೋಹಾ ಕತಾರ್ ನಲ್ಲಿ ನೆಲೆಸಿರುವ ಸಮಾನ ಮನಸ್ಕ ಕುಲಾಲರ ಸ್ನೇಹಿತರ ಬಳಗವು ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ಬೈಕಂಪಾಡಿ ಮೀನಕಳಿಯ ಕೇಶವ ಕುಲಾಲರ ಕುಟುಂಬ, ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ಮೂಡ ಗ್ರಾಮದ ಗಾಂದೋಡಿ ಲಲಿತಾ ಮೂಲ್ಯ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಗುರುಪುರ ತಾರಿಕರಿ ನಿವಾಸಿ ಸುಭಾಷ್ ಕುಲಾಲರ ಪುತ್ರಿ ಅನುಶಿಕ ಕುಲಾಲ್ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದೆ.
ಈ ಮೂರೂ ಕುಟುಂಬಗಳಿಗೆ ತಲಾ 25,000 ದಂತೆ ಒಟ್ಟು 75 ಸಾವಿರ ರೂಪಾಯಿ ನೆರವನ್ನು ನೀಡಿದೆ. ಹೊರದೇಶದಲ್ಲಿ ದುಡಿಯುತ್ತಿದ್ದರೂ ನಾಡಿನ ಸಮುದಾಯದ ನೊಂದ ಕುಟುಂಬಕ್ಕೆ ಆರ್ಥಿಕ ಸ್ಥೈರ್ಯ ತುಂಬುವ `ದೋಹಾ ಕುಲಾಲ್ಸ್’ನ ಕಾರ್ಯಕ್ಕೆ ಪ್ರಸಂಶೆ ವ್ಯಕ್ತವಾಗಿದೆ.