ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ : ಶಂಕರ್ ಕುಲಾಲ್ ಜನ್ನಾಡಿ
ಹೊಂಬಾಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಮೂಲಕ ಶೈಕ್ಷಣಿಕವಾಗಿ ಸದೃಢಗೊಳಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಕುಲಾಲ ಸಮಾಜ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಶಂಕರ್ ಕುಲಾಲ್ ಜನ್ನಾಡಿ ಹೇಳಿದರು.
ಹೊಂಬಾಡಿಯ ಕುಲಾಲ ಸಮುದಾಯ ಭವನದಲ್ಲಿ ಇತ್ತೀಚೆಗೆ ಜರುಗಿದ ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇದರ 28ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ‘ಕುಲಾಲ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸಬಲರಾಗಬೇಕು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸ್ಥಾನ ಅಲಂಕರಿಸಬೇಕು, ಸರಕಾರಿ ಅಧಿಕಾರಿಗಳಾಗಿ ರೂಪುಗೊಳ್ಳಬೇಕು. ಆಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಮಂಜುನಾಥ ಆಸ್ಪತ್ರೆಯ ನಿರ್ದೇಶಕ ಡಾ. ಎಮ್. ವಿ. ಕುಲಾಲ್, ಕರಾವಳಿಯಲ್ಲಿ ಅಂದಾಜು ನಾಲ್ಕು ಲಕ್ಷ, ರಾಜ್ಯದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಇರುವ ಕುಲಾಲ ಸಮುದಾಯಕ್ಕೆ ರಾಜಕೀಯ ಪಕ್ಷಗಳು ಅವಕಾಶವನ್ನು ನೀಡಬೇಕು. ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇಲ್ಲಿನ ಅಧ್ಯಕ್ಷರಾದ ನಿರಂಜನ ಎಮ್. ಅಸೋಡು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಬಸವ ಕುಲಾಲ್ ಕೆದೂರು, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಜನ್ಸಾಲೆ, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಮೊಳಹಳ್ಳಿ, ಕುಲಾಲ ಸಮುದಾಯ ಭವನ ಹೊಂಬಾಡಿ ಇದರ ಮೇಲ್ವಿಚಾರಕರಾದ ಹರೀಶ್ ಕುಲಾಲ್ ಹೊಂಬಾಡಿ, ಮಂಜುನಾಥ್ ಕುಲಾಲ್ ನೆಲ್ಲಿಕಟ್ಟೆ, ಸುರೇಶ್ ಆಜ್ರಿ, ಶಿಕ್ಷಕಿ ರೇಖಾ ಪ್ರಭಾಕರ ಕುಲಾಲ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಕ್ಷಗುರು ಮಂಜುನಾಥ್ ಕುಲಾಲ್ ಐರೋಡಿ, ಕುಂಬಾರಿಕೆ ಕಾಯಕದ ಶ್ರೀಮತಿ ರುಕ್ಕು ಕುಲಾಲ್ ವಾಲ್ತೂರು, ಕೃಷ್ಣ ಕುಲಾಲ್ ರಟ್ಟಾಡಿ, ಶೈಕ್ಷಣಿಕ ಕ್ಷೇತ್ರದ ವಿಶೇಷ ಸಾಧನೆಗಾಗಿ ಪವಿತ್ರ ಕೆ. ಎಸ್. ನೆಲ್ಲಿಕಟ್ಟೆ, ಕರಾಟೆಪಟು ಪ್ರಿತೇಶ್ ಕುಲಾಲ್ ನಾಲ್ತೂರು, ಯೋಗಪಟು ಸಂಕೇತ್ ಕುಲಾಲ್ ಮೆಟ್ಟಿನಹೊಳೆ, ಹಿರಿಯ ಕಾರ್ಯಕರ್ತರಾದ ಮಹಾಬಲ ಕುಲಾಲ್ ಹೆರವಳ್ಳಿ, ಗೋಪಿನಾಥ್ ಕುಲಾಲ್ ಕೋಟೇಶ್ವರ, ಸಂಗೀತ ಕಲಾವಿದರಾದ ಪ್ರಶಾಂತ್ ಕುಲಾಲ್ ಹಳ್ಳಾಡಿ ಮತ್ತು ವಿಜಯಲಕ್ಷ್ಮಿ ಮೆಟ್ಟಿನಹೊಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿದ್ಕಲ್ ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಕುಲಾಲ ಕ್ರೀಡೋತ್ಸವದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.ಸಮುದಾಯ ಸಂಘಟನೆಯ ಕಾರ್ಯಕರ್ತರಾದ ರಾಜು ಕುಲಾಲ್ ನೂಜಿ ಸ್ವಾಗತಿಸಿದರು. ತೇಜ ಕುಲಾಲ್ ಕೆದೂರು ಧನ್ಯವಾದ ಸಮರ್ಪಿಸಿದರು. ಸಂತೋಷ್ ಕುಲಾಲ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಸತ್ಯನಾರಾಯಣ ಪೂಜೆ ಜರುಗಿತು.ಉದ್ಘಾಟನಾ ಸಮಾರಂಭದ ನಂತರ ಸಮುದಾಯದ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ವರದಿ: ಮಂಜುನಾಥ ಹಿಲಿಯಾಣ, ಮಣಿಪಾಲ