ಮಂಗಳೂರು: ರೇಗೋ ಈವೆಂಟ್ಸ್ ವತಿಯಿಂದ ನಡೆಸಿದ `ಮಿಸ್ ಆಂಡ್ ಮಿಸ್ಸಸ್ ಮಂಗಳೂರು 2018′ ಎಂಬ ಸ್ಪರ್ಧೆಯಲ್ಲಿ ಉಡುಪಿಯ ಸ್ವಾತಿ ಕುಲಾಲ್ ಅವರು `ಮಸ್ಟರ್ಡ್ ಪ್ರಿನ್ಸೆಸ್’ (mustard princess) ಎಂಬ ಟೈಟಲ್ ಗೆದ್ದಿದ್ದಾರೆ.

ರೇಗೋ ಈವೆಂಟ್ಸ್ ಎಂಬ ಸಂಸ್ಥೆಯು ಚಾರಿಟಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಅಮೆಂಡಾ ಲಸ್ರಾದೋ ಮಿಸ್ ಮಂಗಳೂರು ಹಾಗೂ ಲೀವಿಯ ಅಲ್ಮಿಡಿಯಾ ಮಿಸ್ಸಸ್ ಮಂಗಳೂರು ಆಗಿ ಆಯ್ಕೆಗೊಂಡರು.



