ವಿಟ್ಲ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿಟ್ಲದ ಕುಲಾಲ ಸಂಘದ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಮೀಪದ ಸಂಘದ ನಿವೇಶನದಲ್ಲಿ ನಡೆಯಿತು.
ಸಾಹಿತಿ ಆನಂದ ಬಂಜನ್ ಮಾತನಾಡಿ ಕರ್ನಾಟಕದ ಮಾಸೂರು ಎಂಬಲ್ಲಿ ಹುಟ್ಟಿದ ಸರ್ವಜ್ಞ ಕುಂಬಾರ ಕುಟುಂಬದವರು ಎಂಬುದಕ್ಕೆ ಹಲವಾರು ದಾಖಲೆಗಳು ಇವೆ. ಈಗ ಬೇರೆ ಜನಾಂಗದವರು ನಮ್ಮ ಕುಲದವರು ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಾಜ್ಯ ವ್ಯಾಪ್ತಿಯಲ್ಲಿ ಸಂಘಟನೆ ಮಾಡಲಾಗುತ್ತಿದ್ದು, ಕೆಲವೇ ಸಮಯದಲ್ಲಿ ಸ್ಪಷ್ಟ ಉತ್ತರ ಸಿಗಲಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೌರವ್, ಧನುಷ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ವಿವಿಧ ಆಟೋಟಗಳ ಬಹುಮಾನ ವಿತರಿಸಲಾಯಿತು.
ವಿಟ್ಲ ಕುಲಾಲ ಸಂಘದ ಅಧ್ಯಕ್ಷ ದಿವಾಕರ ಕೋಡಿ ವಿಟ್ಲ, ಕದ್ರಿ ಐಟಿಐ ಪ್ರಾಂಶುಪಾಲ ಗಿರಿಧರ ಸಾಲ್ಯಾನ್, ಸಮಾಜ ಸೇವಾ ಸಹಕಾರಿ ಬ್ಯಾಂಕ್ ಪುಂಜಾಲಕಟ್ಟೆ ಶಾಖಾ ವ್ಯವಸ್ಥಾಪಕಿ ಕಮಲ, ಕಾರ್ಯದರ್ಶಿಗಳಾದ ಸುರೇಶ್ ಕುಲಾಲ್ ವಿಟ್ಲ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರಮಾನಾಥ ವಿಟ್ಲ, ಸುಚಿತ್ರಾ ರಮಾನಾಥ ವಿಟ್ಲಕುಲಾಲ ಸಂಘದ ಸದಸ್ಯ ನಾರಾಯಣ ಮೂಲ್ಯ ಪುಣಚ, ರೇವತಿ ರವೀಂದ್ರ, ಕುಲಾಲ ಮಹಿಳಾ ಘಟಕ ಅಧ್ಯಕ್ಷ ಉಷಾ ವಸಂತ ಎರುಂಬು, ಅರುಣಾಕರ, . ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕ ಬಾಲಕೃಷ್ಣ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.