ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಂಕಿ ಆಕಸ್ಮಿಕದಲ್ಲಿ ತಮ್ಮ ಮನೆಯನ್ನು ಕಳೆದುಕೊಂಡ ಬೈಕಂಪಾಡಿ ಕೇಶವ ಮೂಲ್ಯರ ಕುಟುಂಬಕ್ಕೆ ಕುಳಾಯಿ ಕುಲಾಲ ಸಂಘದ ವತಿಯಿಂದ ನೆರವು ನೀಡಲಾಯಿತು.
ಕುಳಾಯಿ ಕುಲಾಲ ಸಂಘದ ವತಿಯಿಂದ 5,000 ಹಾಗೂ ಯುವ ವೇದಿಕೆ ಸುರತ್ಕಲ್ ವಲಯದ ಅಧ್ಯಕ್ಷ ಗಣೇಶ್ ಕುಲಾಲ್ ಇವರ ವತಿಯಿಂದ 25 ಕೆ ಜಿ ಅಕ್ಕಿ ಹಾಗೂ ವೈಯುಕ್ತಿಕವಾಗಿ ಕಲಾ ಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇದರ ಸಂಚಾಲಕ ನಾಗೇಶ್ ಕುಲಾಲ್ ರೂಪಾಯಿ 1000 ನೀಡಿದರು.
ಈ ಸಂದರ್ಭದಲ್ಲಿ ಕುಳಾಯಿ ಕುಲಾಲ ಸಂಘದ ಅಧ್ಯಕ್ಷ ರಾದ ಗಂಗಾಧರ್ ಕೆ ಕಾರ್ಯದರ್ಶಿ ಗಂಗಾಧರ್ ಬಂಜನ್, ಮಾಜಿ ಅಧ್ಯಕ್ಷರಾದ ಜನಾರ್ಧನ್ ಸಾಲಿಯಾನ್, ಶ್ರೀನಾಥ್ ವಂಶಿ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ರಾಜೀವಿ ಹರೀಶ್, ಯುವ ವೇದಿಕೆ ಸುರತ್ಕಲ್ ವಲಯದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.
ಡಿ. 15ರಂದು ಕೇಶವ ಮೂಲ್ಯ ಅವರ ಮನೆ ಬೆಂಕಿ ಹೊತ್ತಿ ಉರಿದು ಗೃಹ ಉಪಯೋಗಿ ವಸ್ತುಗಳು, ಬಟ್ಟೆ ಬರೆಗಳು ಹಾಗೂ ಮನೆ ಸಂಪೂರ್ಣ ನಾಶವಾಗಿದು, ಈಗ ಅವರಿಗೆ ಉಳಿದುಕೊಳ್ಳಲು ಮನೆ ಇಲ್ಲದೆ ಬೀದಿ ಬದಿಯಲ್ಲಿ ವಾಸಿಸುವಂತಾಗಿದೆ. ನಿರ್ಗತಿಕರಾದ ಈ ದಂಪತಿಗಳಿಗೆ ಎರಡು ಹೆಣ್ಣು ಮಕ್ಕಳಿದ್ದು ಅವರುಕೂಡ ವಿದ್ಯಾರ್ಥಿನಿಗಳಾಗಿರುತ್ತಾರೆ. ಕಷ್ಟದಲ್ಲಿರುವ ಈ ಕುಟುಂಬ ಸಾರ್ವಜನಿಕರ ಆರ್ಥಿಕ ಸಹಾಯವನ್ನು ನಿರೀಕ್ಷೆಯಲ್ಲಿದೆ.
ಬ್ಯಾಂಕ್ ಖಾತೆ ವಿವರ :
Name: Keshava kulal
Acc No: 520101013635308
IFSC Code: CORP0000176
Corporation bank
Branch: Baikampady
ಅಥವಾ
Name : Babitha kulal(D/O Keshava kulal)
Account number -015601562459
IFSC CODE – ICIC0000156
ICICI bank
Mobile number – 7760215863