ಕ್ರೀಡೆಯಿಂದ ಸಮುದಾಯ ಸಂಘಟನೆಯ ಬಲವರ್ಧನೆ ಸಾಧ್ಯ: ಡಾ. ಎಮ್ ವಿ ಕುಲಾಲ್
ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕುಲಾಲ ಸಮುದಾಯ ಶೋಷಿತ ಬಡ ಸಮುದಾಯ. ಶೈಕ್ಷಣಿಕವಾಗಿ-ಸಾಮಾಜಿಕವಾಗಿ ಅಭಿವೃದ್ದಿ ಹೊಂದುತ್ತಿರುವ ಈ ಸಮುದಾಯ ಬೆಳವಣಿಗೆ ಹೊಂದುವಲ್ಲಿ ಸಂಘಟನೆಗಳು ಮುಖ್ಯ ಪಾತ್ರ ವಹಿಸಿದೆ. ಈ ನೆಲೆಯಲ್ಲಿ ಸಂಘಟನೆಯನ್ನು ಗಟ್ಟಿಪಡಿಸುವಲ್ಲಿ, ಕುಂಬಾರ ಯುವ ಮನಸ್ಸುಗಳನ್ನು ಸಂಘಟನೆಗೆ ಕರೆತರುವಲ್ಲಿ ಸಮುದಾಯ ಕ್ರೀಡೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಕುಂದಾಪುರದ ಮುಂಜುನಾಥ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಮ್ .ವಿ ಕುಲಾಲ್ ಅಭಿಪ್ರಾಯಪಟ್ಟರು.
ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇದರ ಆಶ್ರಯದಲ್ಲಿ ಬಿದ್ಕಲ್ ಕಟ್ಟೆ ಕಾಲೇಜು ಕ್ರೀಡಾಂಗಣದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಕುಲಾಲರಿಗೆ ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ ಮತ್ತು ಬೈಂದೂರು ಇವರು ಹಮ್ಮಿಕೊಂಡ ಮೂರನೇ ವರ್ಷದ ಕುಲಾಲ ಕ್ರೀಡೋತ್ಸವ-2018 ಮತ್ತು ನೂತನ ಪಧಾಧಿಕಾರಿಗಳಿಗೆ ಹಮ್ಮಿಕೊಂಡ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರಾವಳಿ ಕುಲಾಲ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ, ಕರಾವಳಿ ಕುಲಾಲ ಯುವ ವೇದಿಕೆ ದಶಮಾನದ ಸಂಭ್ರಮದಲ್ಲಿದ್ದು ಕರಾವಳಿಯ ಮೂಲೆ ಮೂಲೆಯ ಕುಲಾಲ ಯುವ ಮನಸ್ಸುಗಳನ್ನು ಸಂಘಟನೆಯಡಿಗೆ ಕರೆತರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಬಂದಿದೆ. ಅದರಲ್ಲೂ ಸಭ್ಯತೆ-ಮತ್ತು ಪ್ರಾಮಾಣಿಕತೆಗೆ ಹೆಸರಾದ ಕುಂದಾಪುರ ತಾಲೂಕಿನ ಕುಲಾಲರನ್ನು ಒಗ್ಗೂಡಿಸುವ ಕೆಲಸವನ್ನು ಯುವ ವೇದಿಕೆ ಅತ್ಯಂತ ಜವಬ್ದಾರಿತನದಿಂದ ಮಾಡಿದ್ದು ಇದರಲ್ಲಿ ಯಶಸ್ಸನ್ನು ಕಂಡಿದೆ. ಕುಂದಾಪುರ ತಾಲೂಕಿನ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಕುಲಾಲ ಸಮುದಾಯಕ್ಕೆ ರಾಜಕೀಯ-ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬೇಕು ಎಂದು ಒತ್ತಾಯಿಸಿದರು.
ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ನಿರಂಜನ ಎಂ. ಅಸೋಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜಾಪುರದ ಚೌಡೇಶ್ವರಿ ಸೌಹರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಎಮ್. ಎನ್ ನಾಗೂರು, ಕರಾವಳಿ ಕುಲಾಲ ಯುವ ವೇದಿಕೆಯ ರಾಜ್ಯಧ್ಯಕ್ಷ ತೇಜಸ್ವಿರಾಜ್, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಜನ್ಸಾಲೆ, ಶಿಕ್ಷಕ ಕರುಣಾಕರ ಶೆಟ್ಟಿ, ಕರಾವಳಿ ಕುಲಾಲ ಯುವ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಕರಾವಳಿ ಕುಲಾಲ ಯುವ ವೇದಿಕೆಯ ಕುಂಧಾಪುರ ಅಧ್ಯಕ್ಷರಾದ ಹರೀಶ್ ಕುಲಾಲ್ ಕೆದೂರು, ಕರಾವಳಿ ಕುಲಾಲ ಯುವ ವೇದಿಕೆಯ ಬೈಂದೂರು ಅಧ್ಯಕ್ಷರಾದ ಮಂಜುನಾಥ್ ಕುಲಾಲ್ ಜನ್ಸಾಲೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿ ಕುಲಾಲ ಯುವ ವೇದಿಕೆಯ ನೂತನ ಪಧಾಧಿಕಾರಿಗಳಿಗೆ ಪದ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರದ ಅಧ್ಯಕ್ಷರಾದ ಹರೀಶ್ ಕುಲಾಲ್ ಕೆದೂರು ಸ್ವಾಗತಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು.
*************************************************************************************************************
‘ಸಂಘಟನೆಯ ಬಲವರ್ದನೆಯ ದೃಷ್ಟಿಯಿಂದ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಕುಲಾಲರಿಗೆ ಹಮ್ಮಿಕೊಂಡ ಕ್ರೀಡಾಕೂಟ ಯಶಸ್ಸನ್ನು ಕಂಡಿದೆ. ಒಂದು ಸಾವಿರಕ್ಕೂ ಅಧಿಕ ಯುವ ಕುಲಾಲ ಕ್ರೀಡಾ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದು ಮುಂದಿನ ವರ್ಷದಲ್ಲಿ ಇನ್ನಷ್ಟು ದೊಡ್ಡಮಟ್ಟದಲ್ಲಿ ಕ್ರೀಡೋತ್ಸವವನ್ನು ನಡೆಸಲಾಗುವುದು”
-ಪ್ರಭಾಕರ ಕುಲಾಲ್ ಜನ್ಸಾಲೆ ( ಕ್ರೀಡೋತ್ಸವದ ಪ್ರಮುಖ ಸಂಘಟಕ, ವಲಯ ಅರಣ್ಯಾಧಿಕಾರಿ, ಕುಂದಾಪುರ)
—————————————————————————————————————————————————
“ಕುಂದಾಪುರ ತಾಲೂಕಿನಾದ್ಯಂತ ಇರುವ ಕುಲಾಲರನ್ನು ಸಂಘಟನೆಯಡಿ ಒಗ್ಗೂಡಿಸಲು ಈ ಕುಲಾಲ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕುಲಾಲರಿಗೆ ಸಾಮಾಜಿಕ-ರಾಜಕೀಯ ಪ್ರಾತಿನಿದ್ಯ ದೊರೆಯಬೇಕಾಗಿದೆ. ಈ ನೆಲೆಯಲ್ಲಿ ಕರಾವಳಿ ಕುಲಾಲ ಯುವ ವೇದಿಕೆ ಮುಂದಿನ ದಿನಗಳಲ್ಲಿ ಇನ್ನು ಸಾಕಷ್ಟು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಅವಕಾಶ ಕೇಳಲಾಗುವುದು.
-ಸತೀಶ್ ಕುಲಾಲ್ ನಡೂರು(ಉಡುಪಿ ಜಿಲ್ಲಾಧ್ಯಕ್ಷ, ಕರಾವಳಿ ಕುಲಾಲ ಯುವ ವೇದಿಕೆ)
ಚಿತ್ರ ವರದಿ: ಮಂಜುನಾಥ ಹಿಲಿಯಾಣ