ಹೆಸರು ಬದಲಿಸಿಕೊಂಡ ತ್ರಿಭಾಷಾ ನಟ
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ತೆರೆಯೆ ಮೇಲೆ ಟೈಟಲ್ ಕಾರ್ಡಿನಲ್ಲಿ ತಮ್ಮ ಹೆಸರು ಕಾಣಿಸಿಕೊಂಡಾಗ ಅದು ಆಕರ್ಷಣೀಯವಾಗಿರಬೇಕೆಂದು ಚಿತ್ರ ನಟ/ನಟಿಯರು ಬಯಸುವುದು ಅಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿತ್ತು. ಈಗಲೂ ನಡೆದುಕೊಂಡು ಬರುತ್ತಿದೆ. ಮುತ್ತುರಾಜ್ ರಿಂದ ರಾಜ್ ಕುಮಾರ್, ಸಂಪತ್ ಕುಮಾರ್ ರಿಂದ ವಿಷ್ಣುವರ್ಧನ್, ಅಮರ್ ನಾಥ್ ರಿಂದ ಅಂಬರೀಶ್ ಹೀಗೆ ಸಿನಿಮಾ ನಟರಾದ ಮೇಲೆ ಕೆಲವು ನಟರ ಹೆಸರು ಬದಲಾಗಿದ್ದು ಇತಿಹಾಸ. ಈ ರೀತಿಯ ಹೆಸರು ಬದಲಾವಣೆ ಕೆಲವರಿಗೆ ಅದೃಷ್ಟ ತಂದುಕೊಟ್ಟಿದೆ. ಇಂದಿಗೂ ಅನೇಕ ನಟ ನಟಿಯರು ಲಕ್ ಬೇಕು ಎಂಬ ಕಾರಣಕ್ಕೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ.
ಹೆಸರು ಬದಲಾಯಿಸಿದ ತಕ್ಷಣ ಅದೃಷ್ಟ ಒಲಿದು ಬರುವುದು ನಿಜವೋ…ಸುಳ್ಳೋ ಆದರೆ ತುಳು-ಕನ್ನಡ-ತೆಲುಗು ಹೀಗೆ ತ್ರಿಭಾಷಾ ನಟನಾಗಿ ಬೆಳಕಿಗೆ ಬರುತ್ತಿರುವ ತುಳುನಾಡಿನ ಕುಲಾಲ ಸಮುದಾಯದ ಕುವರ ಮನೋಜ್ ಪುತ್ತೂರು ಅವರೂ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅವರು ತಮ್ಮ ಫೇಸ್ ಬುಕ್ ಮೂಲಕ ಅ.೨೧ ರಿಂದ ತಮ್ಮ ಹೆಸರನ್ನು `ಅದ್ವೈತ್’ ಎಂದು ಬದಲಿಸಿದ್ದಾಗಿ ತಿಳಿಸಿದ್ದಾರೆ. “ಇವತ್ತಿನಿಂದ ಪ್ರೊಫೆಷನ್ ಗೋಸ್ಕರ ನನ್ನ ಹೆಸರನ್ನು`ಅದ್ವೈತ್’ ಎಂದು ಬದಲಿಸಿಕೊಂಡಿದ್ದೇನೆ. ಹೆಸರಷ್ಟೇ ಬದಲಾಗಿದೆ. ಆದ್ದರಿಂದ ತಮ್ಮ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೆ ಇರಲಿ. ” ಎಂದು ಹೇಳಿಕೊಂಡಿದ್ದಾರೆ.
Facebook link—-