ಸಂಘದ ಮಹಾಸಭೆ-ಸನ್ಮಾನ ಸಮಾರಂಭ
ಮಂಗಳೂರು(ಜೂ.೨೮): ತೋಕೂರು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯೆ ಲೀಲಾ ಬಂಜನ್ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ಸಾಧಕರಿಗೆ ಗೌರವಿಸಲಾಯಿತು.
ಎಸ್.ಕೋಡಿ ಕುಲಾಲ ಸಂಘದ ಸಭಾಭವನದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಗೋಪಾಲ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಕೋರಿದರು.
ಸಮಾರಂಭದಲ್ಲಿ ಕುಂಬಾರ ವೃತ್ತಿ ಮಾಡುತ್ತಿರುವ ಹಿರಿಯರಾದ ಬೂಬ ಕುಲಾಲ್ ಕೆಂಚನಕೆರೆ ಹಾಗೂ ಕಿನ್ನಿಗೋಳಿ ರೈಲ್ವೆ ಗೇಟ್ ಕುರಿತು ಪ್ರಧಾನಮಂತ್ರಿಗೆ ಪತ್ರ ಬರೆದು ಗಮನಸೆಳೆದ ಧೃತಿ ಕುಲಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ ಕುಲಾಲ್ ಕುಬೆವೂರು, ಲೀಲಾ ಬಂಜನ್, ಸಂಘದ ಉಪಾಧ್ಯಕ್ಷೆ ಜಯ ಎಲ್ ಬಂಗೇರ, ಕಮಲಾಕ್ಷ ಬಂಗೇರ, ಗೌರವಾಧ್ಯಕ್ಷ ಶ್ರೀಧರ ಬಂಗೇರ, ಜಿನರಾಜ ಬಂಗೇರ, ಯೋಗೀಶ್ ಮೂಲ್ಯ ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮಣ ಬಿ.ಬಿ ಏಳಿಂಜೆ ಕಾರ್ಯಕ್ರಮ ನಿರೂಪಿಸಿದರು.