ಪುತ್ತೂರು(ಜೂ.೧೩) : ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಿ.ವಿ.ದಿನೇಶ್, ಉಪಾಧ್ಯಕ್ಷರಾಗಿ ಸಚ್ಚಿದಾನಂದ ಡಿ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಮಹೇಶ್ ಕೆ.ಸವಣೂರು ಪುನರಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಹಕಾರಭವನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಜೊತೆಕಾರ್ಯದರ್ಶಿಯಾಗಿ ಚಂದಪ್ಪ ಶೇವಿರೆ , ಕೋಶಾಧಿಕಾರಿಯಾಗಿ ಪಿ.ಧರ್ಣಪ್ಪ ಮೂಲ್ಯ ನೆಹರುನಗರ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸತೀಶ್ ಕುಲಾಲ್ ಉಡ್ಡಂಗಳ, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಬಲ್ನಾಡುರವರು ಆಯ್ಕೆಯಾದರು.
ಕೃಷ್ಣ ಮೂಲ್ಯ ಅಳಿಕೆ, ಧರ್ಣಪ್ಪ ಮೂಲ್ಯ ಕಜೆ, ಆನಂದ ಕುಲಾಲ್ ಪಡೀಲ್, ಶೀನಪ್ಪ ಮೂಲ್ಯ ವೀರಮಂಗಲ, ವಸಂತ ಕುಲಾಲ್ ನೆಹರುನಗರ, ರವಿ ಕುಲಾಲ್ ಕೈತಡ್ಕ, ಜನಾರ್ದನ ಸೀಟಿಗುಡ್ಡೆ, ಕೃಷ್ಣಪ್ಪ ಕೆ, ಜನಾರ್ದನ ಸಾರ್ಯ, ಕೃಷ್ಣಪ್ಪ ಮಚ್ಚಿಮಲೆ, ಚಂದ್ರಶೇಖರ ಕೆ, ತುಕಾರಾಮ ಕುಲಾಲ್, ಸೀತಾರಾಮ ಕುಲಾಲ್ ಮೊದಲಾದವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.