ಮಂಗಳೂರು(ಜೂ.೧೦) : ಕುಳಾಯಿ ಕುಲಾಲ ಸಂಘ ಹಾಗೂ ಮಹಿಳಾ ಮಂಡಲದ ವತಿಯಿಂದ ಕುಲಾಲ ರಜತ ಸೇವಾ ಟ್ರಸ್ಟ್ ನ ದತ್ತು ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕಾ ಸಲಕರಣೆ ವಿತರಣಾ ಸಮಾರಂಭವು ಜೂನ್ 18ರಂದು ನಡೆಯಲಿದೆ.
ಆನಂದ ಬಂಜನ್
ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀಕುಮಾರ್ ಕಾವಿನಕಲ್ಲು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ದ.ಕ ಜಿಲ್ಲಾ ನಿರ್ದೇಶಕ, `ಮತ್ತೆ ಹುಟ್ಟಿ ಬಾ ಸರ್ವಜ್ಞ’ ಪುಸ್ತಕದ ಕರ್ತೃ ಆನಂದ ಬಂಜನ್, ಮೂಲ್ಯರ ಮಾತೃ ಸಂಘದ ಕಾರ್ಯದರ್ಶಿ ಪ್ರಸಾದ್ ಸಿದ್ಧಕಟ್ಟೆ, ಅರ್ಪಿತಾ ಸ್ಟುಡಿಯೋ ಮಾಲಕ ಪ್ರಭಾಕರ ಕುಲಾಲ್, ಬಿಎಸ್ ಎನ್ ಎಲ್ ನಿವೃತ್ತ ಅಧಿಕಾರಿ ವಾಮನ್ ಚಿತ್ರಾಪುರ, ಹಿರಿಯ ಮುಖಂಡ ಶಂಕರ ಐ ಮೂಲ್ಯ ಹೊಸಬೆಟ್ಟು, ಸಂಗೀತ ಶಿಕ್ಷಕಿ ರಾಜೇಶ್ವರಿ ಉದಯ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಕುಲಾಲ ರಜತ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀನಾಥ್, ಮಹಿಳಾ ಮಂಡಲದ ಅಧ್ಯಕ್ಷೆ ಬೇಬಿ ಪದ್ಮನಾಭ ಹಾಗು ವಿದ್ಯಾರ್ಥಿ ನಾಯಕರಾದ ಚೇತನ್, ರಕ್ಷಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.