ವೇಣೂರು: ಗುಜರಾತ್ನ ರಾಜಕೋಟ್ನಲ್ಲಿ ಗುರುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ನವವಿವಾಹಿತ ಮಹಿಳೆ ಸೇರಿದಂತೆ ೯ ಮಂದಿ ಮೃತಪಟ್ಟಿದ್ದಾರೆ.
ಪಡಂಗಡಿ ಗ್ರಾಮದ ಮೇಕಾಜೆ ದಿ| ಕಿಟ್ಟು ಮೂಲ್ಯರ ಪುತ್ರಿ ರಾಮು ಮೂಲ್ಯರವರ ಸಹೋದರಿ ಲೀಲಾ (೩೫) ಮೃತಪಟ್ಟವರು. ಲೀಲಾರವರನ್ನು ಕಳೆದ ಸೋಮವಾರ ಗುಜರಾತ್ ರಾಜಕೋಟ್ನ ಯುವಕನಿಗೆ ಮದುವೆ ಮಾಡಿ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ವರನ ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರೊಂದಿಗೆ ಗುರುವಾರ ಬೆಳಿಗ್ಗೆ ಕಾರಿನಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ರಾತ್ರಿ ವಾಪಸಾಗುತ್ತಿದ್ದ ವೇಳೆ ಇವರು ಚಲಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿ ಲೀಲಾ, ವರ ಹಾಗೂ ವರನ ಹೆತ್ತವರು ಸೇರಿದಂತೆ ಕಾರಿನಲ್ಲಿದ್ದ ೯ ಮಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ವರನ ಮನೆಯಲ್ಲಿ ನೀರವ ಮೌನ ಆವರಿಸಿದೆ.
ರಾಮು ಮೂಲ್ಯರು ದೈವಗಳ ಮುಕ್ಕಲ್ದಿ ಕೆಲಸ ಮಾಡಿಕೊಳ್ಳುತ್ತಿದ್ದು, ಇಬ್ಬರು ಸಹೋದರಿಯರನ್ನು ಮದುವೆ ಮಾಡಿಕೊಡಲಾಗಿದ್ದು, ಓರ್ವ ಸಹೋದರಿಯನ್ನು ಗುಜರಾತ್ಗೆ ನೀಡಲಾಗಿತ್ತು. ರಾಮು ಮೂಲ್ಯರು ಅವಿವಾಹಿತರಾಗಿದ್ದು, ಬಹಳ ಕಷ್ಟದಲ್ಲಿಯೇ ಸಹೋದರಿಯನ್ನು ಮದುವೆ ಮಾಡಿಕೊಟ್ಟಿದ್ದರು.
ಭೀಕರ ರಸ್ತೆ ಅಪಘಾತದಲ್ಲಿ ಪಡಂಗಡಿಯ ನವವಿವಾಹಿತೆ ಲೀಲಾ ಮೂಲ್ಯ ಮೃತ್ಯು
Kulal news
1 Min Read