ಬೆಂಗಳೂರು(ಮೇ.೧೫): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವೈದ್ಯರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಶ್ರೀನಿವಾಸನ್ ವೇಲು ಅವರು ಆಯ್ಕೆಯಾಗಿದ್ದಾರೆ. ಕುಂಬಾರ ಸಮುದಾಯದವರಾದ ಶ್ರೀನಿವಾಸನ್ ಹೃದಯ ರೋಗ ತಜ್ಞರು. ಇವರು ಕುಂಭ ವೈದ್ಯರ ಕೂಟದ ಸ್ಥಾಪಕ ಸದಸ್ಯ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದಾರೆ.
ಶ್ರೀನಿವಾಸನ್ ಆಯ್ಕೆ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಎರಡರಲ್ಲೂ ವೈದ್ಯಕೀಯ ಘಟಕದ ರಾಜ್ಯ ಜವಾಬ್ದಾರಿಗಳು ಕುಂಬಾರ ಸಮುದಾಯಕ್ಕೆ ದೊರೆತಂತಾಗಿದ್ದು, ಈ ಹಿಂದೆ ಬಿಜೆಪಿಯಿಂದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಈ ಹುದ್ದೆ ಲಭಿಸಿತ್ತು.
ಡಾ ಶ್ರೀನಿವಾಸನ್ ಮೂಲತಃ ತಮಿಳುನಾಡಿನವರಾಗಿದ್ದು, ಬಹಳಷ್ಟು ವರ್ಷಗಳ ಹಿಂದೆ ಕರ್ನಾಟಕಕ್ಕೆಬಂದು ನೆಲೆಸಿದ್ದು, ಕುಂಬಾರರ- ಒಡೆಯರ ಸಮುದಾಯದವರನ್ನು ಸೇರಿಸಿ ಕರ್ನಾಟಕ ಕುಂಬಾರ ಸಂಘವನ್ನು ಕಟ್ಟಿ ಅದರ ಸ್ಥಾಪಕ ಅಧ್ಯಕ್ಷರಾಗಿ ಸಮಾಜವನ್ನು ಸಂಘಟಿಸುವ ಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ವೈದ್ಯರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಶ್ರೀನಿವಾಸನ್ ಆಯ್ಕೆ
Kulal news
1 Min Read