ಬಂಟ್ವಾಳ(ಏ.೨೫) : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಡೇಶಿವಾಲಯ ನಿವಾಸಿ ಶಿವರಾಮ ಕುಲಾಲ್ ಎಂಬವರ ಪುತ್ರಿ ಮಮತಾ ಕುಲಾಲ್ (20) ಪುತ್ತೂರಿನಲ್ಲಿ ಪತ್ತೆಯಾಗಿದ್ದಾಳೆ.
ಪುತ್ತೂರಿನಲ್ಲಿ ಪ್ಯಾರಾ ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದ ಈಕೆ ಸುಮಾರು 6 ತಿಂಗಳ ಹಿಂದೆ ಮಾನಸಿಕ ಕಾಯಿಲೆಗೆ ತುತ್ತಾಗಿ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದಳು. ಆ ನಂತರ ಚಿಕಿತ್ಸೆಯಿಂದ ಚೇತರಿಸಿಕೊಂಡು ಮನೆಯಲ್ಲಿದ್ದಳು ಎನ್ನಲಾಗಿದೆ. ಈಕೆಗೆ ಮತ್ತೆ ಮಾನಸಿಕ ಖಿನ್ನತೆ ಕಾಯಿಲೆ ಮರುಕಳಿಸಿದ್ದು ಏ.೨೩, ಭಾನುವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದವಳು ಸೋಮವಾರ ಮುಂಜಾನೆ ಮನೆ ಮಂದಿ ನೋಡುವಾಗ ಹಠಾತ್ ನಾಪತ್ತೆಯಾಗಿದ್ದಳು. ಈಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ ೨೪ರಂದು ಸಂಜೆ ಪತ್ತೆಯಾಗಿದ್ದು, ಆಕೆಯನ್ನು ಪೋಷಕರಿಗೆ ಹಸ್ತಾ೦ತರಿಸಲಾಗಿದೆ.
ಕಾಣೆಯಾಗಿದ್ದ ಯುವತಿ ಪುತ್ತೂರಿನಲ್ಲಿ ಪತ್ತೆ
Kulal news
1 Min Read