ಮುಂಬಯಿ(ಮಾ.೦೬): ಕುಲಾಲ ಸಂಘ ಮುಂಬಯಿಯ ಪ್ರಾದೇಶಿಕ ಕಮಿಟಿಯ ಸಕ್ರಿಯ ಕಾರ್ಯಕರ್ತ ಶೇಖರ ಐ ಮೂಲ್ಯ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನ ಕೆರ್ವಾಶೆಯವರಾದ ಇವರು ಚಿಕ್ಕಂದಿನಲ್ಲೇ ಮುಂಬಯಿಗೆ ತೆರಳಿದ್ದು, ಅಲ್ಲಿ ಭಾರತೀಯ ಜೀವ ವಿಮೆ ಕಂಪೆನಿ ಹಾಗೂ ಜ್ಯೋತಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಏಜೆಂಟ್ ಆಗಿ ದುಡಿಯುತ್ತಿದ್ದರು. ಇವರು ಊರಿಗೆ ಬಂದಿದ್ದ ಸಂದರ್ಭ ಮಾರ್ಚ್ ೪ರಂದು ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸರಳ ಸಜ್ಜನ ವ್ಯಕ್ತಿತ್ವದ ಶೇಖರ್ ಮೂಲ್ಯ ಅವರು ಕುಲಾಲ ಸಂಘದ ಥಾಣೆ-ಕಸಾರ-ಕರ್ಜತ್-ಭೀವಂಡಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ, ಸಂಘದ ಸರ್ವ ಕಾರ್ಯಕ್ರಮದಲ್ಲೂ ಭಾಗವಹಿಸಿ, ಅದು ಯಶಸ್ವಿಯಾಗುವಲ್ಲಿ ಅವಿರತವಾಗಿ ಸಹಕರಿಸುತ್ತಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು ಸಹಿತ ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.