ಮಂಗಳೂರು (ಫೆ.೦೩): ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಲಾಲ್ ಬಜಾಲ್ ಅವರಿಗೆ ಜೀವ ಬೆದರಿಕೆ ನೀಡಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆ. 25ರಂದು ನಗರದ ನೆಹರೂ ಮೈದಾನದಲ್ಲಿ ಸಿಪಿಎಂ ವತಿಯಿಂದ ನಡೆದ ಸೌಹಾರ್ದ ರಾಲಿಯ ಮಾರನೇ ದಿನ ಸಂತೋಷ್ ಅವರ ವಾಟ್ಸಾಪ್ ನಂಬರಿಗೆ ಬೆದರಿಕೆ ಬಂದಿದೆ. ಅವರಿಗೆ ಬಂದಿರುವ ಮೆಸೇಜಿನಲ್ಲಿ `ಸಿಪಿಎಂ ಪಕ್ಷದಲ್ಲಿ ಚಟುವಟಿಕೆ ಹೆಚ್ಚಾಗಿದೆ. ನಿನ್ನ ಕೈಕಾಲು ಮುರಿಯುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
ಫೆ. ೨೬ರಂದು ಬಂದ ಮೆಸೇಜನ್ನು ಫೆ. ೨೭ರಂದು ಗಮನಿಸಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.