ಬಂಟ್ವಾಳ(ಫೆ.೨೧) : ಬಂಟ್ವಾಳ ಸೊರ್ನಾಡಿನ ನಿವಾಸಿ ವಿಶ್ವನಾಥ ಅವರ ಪತ್ನಿ ಶೈಲಜಾ ಸಾಲ್ಯಾನ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಂಜಿಕಲ್ಲು ಕ್ಷೇತ್ರದಿಂದ ಇವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ನ ಪದ್ಮಾವತಿ ಪೂಜಾರಿ ಅವರ ವಿರುದ್ಧ ಸೋಲುಂಡಿದ್ದರು.
ಬಂಟ್ವಾಳ ವರ್ತಕರ ವಿವಿಧ್ದೋದ್ದೇಶ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಇವರ ಸಾವಿಗೆ ಆರ್ಥಿಕ ಅಡಚಣೆ ಕಾರಣ ಎನ್ನಲಾಗಿದೆ. ಮೃತರಿಗೆ ಇಬ್ಬರು ಪುತ್ರಿಯರಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಸೊರ್ನಾಡಿನ ಶೈಲಜಾ ಸಾಲ್ಯಾನ್ ಆತ್ಮಹತ್ಯೆ
Kulal news
1 Min Read