ಕಾರ್ಕಳ(ಫೆ.೧೩): ಕ್ರೀಡಾರಂಗದ ಸಾಧನೆಗಾಗಿ ಸುಪ್ರಿಯಾ ಕುಲಾಲ್ ಚೆನ್ನಿಬೆಟ್ಟು ಅವರಿಗೆ ಕರ್ನಾಟಕ ಯುವ ರತ್ನ ಪ್ರಶಸ್ತಿ ಲಭಿಸಿದೆ. ಸುಪ್ರಿಯಾ ಅವರು ಕಬಡ್ಡಿ ಕ್ರೀಡಾಪಟುವಾಗಿ ರಾಜ್ಯಮಟ್ಟದಲ್ಲಿ ಮಿಂಚಿದ ಯುವ ಪ್ರತಿಭೆ. 20ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸಂಚಾಲಕಿಯಾಗಿಯೂ ಸೇವೆ ಸಲ್ಲಿಸಿರುವ ಇವರು ಚೆನ್ನಿಬೆಟ್ಟು ಸದಾನಂದ ಮೂಲ್ಯ-ಗುಲಾಬಿ ದಂಪತಿಯ ಸುಪುತ್ರಿ.
ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಫೆ.11ರಂದು ಉಡುಪಿಯ ಕಾರ್ಕಳ ತಾಲ್ಲೂಕಿನ ಮುದ್ರಾಡಿಯಲ್ಲಿ ನಡೆದ 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಇವರಿಗೆ ಕರ್ನಾಟಕ ಯುವ ರತ್ನ ಗೌರವ ಪ್ರಶಸ್ತಿ ನೀಡಲಾಯಿತು .