ಮಂಗಳೂರು(ಜ.೧೫): ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಸಂಘದ ವತಿಯಿಂದ ಮುಂದಿನ ತಿಂಗಳಲ್ಲಿ ನಡೆಯುವ ಸರ್ವಜ್ಞ ಜಯಂತಿ ಆಚರಣೆಯ ಕುರಿತ ಪೂರ್ವಭಾವಿ ಸಭೆಯು ಜಿಲ್ಲಾ ಮೂಲ್ಯ ಮಾತೃ ಸಂಘದ ಹಾಲ್ ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಂಜಪ್ಪ ಮೂಲ್ಯ ವಹಿಸಿದ್ದರು. ಸರ್ವಜ್ಞ ಜಯಂತಿ ಆಚರಣೆಯ ಸಂದರ್ಭ ಸಂಘದ ಸದಸ್ಯರ ಸ್ನೇಹಕೂಟ, ಕ್ರೀಡಾ ಕೂಟ, ಸಮಾಜದ ಪ್ರತಿಭಾವಂತರಿಗೆ ಸನ್ಮಾನ, ಅಭಿನಂದನಾ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಇದೆ ವೇಳೆ ಸರ್ವಜ್ಞ ಜಯಂತಿ ಆಚರಣಾ ಸಮಿತಿಗೆ ಸಂಘದ ಪದಾಧಿಕಾರಿ ಆನಂದ ಬಂಜನ್ ಅವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂದಿನ ಸಭೆಯಲ್ಲಿ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.
ಜಿಲ್ಲಾ ಸಂಘದ ಕಾರ್ಯದರ್ಶಿ ವಿಶ್ವನಾಥ ಬೈಲಮೂಲೆ, ಉಪಾಧ್ಯಕ್ಷ ಶೇಷಪ್ಪ ಮಾಸ್ಟರ್, ಕೋಶಾಧಿಕಾರಿ ಸುಲೋಚನಾ, ಸಂಘಟನಾ ಕಾರ್ಯದರ್ಶಿ ಸದಾನಂದ, ವಿಜಯಾ, ಸಚ್ಚಿದಾನಂದ, ರವಿಚಂದ್ರ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.