ಕಾಸರಗೋಡು(ಅ.೨೪): ಯುವಕರ ಮಧ್ಯೆ ಹೊಡೆದಾಟ ನಡೆಯುತ್ತಿರುವುದನ್ನು ಕಂಡು ತಡೆಯಲು ಯತ್ನಿಸಿದ ಯುವಕ ಇರಿತದಿಂದ ಗಾಯಗೊಂಡ ಘಟನೆ ನಡೆದಿದೆ. ಬಾಡೂರು ಚಾಕಟೆ ಚಾಲ್ನ ಗೋವಿಂದ ಮೂಲ್ಯರ ಪುತ್ರ ಸಿ.ಎಚ್. ದೀಪಕ್ (೨೪) ಇರಿತದಿಂದ ಗಾಯಗೊಂಡಿದ್ದಾರೆ.
ಎದೆ,ಹೊಟ್ಟೆಗೆ ಇರಿತದಿಂದ ಗಾಯಗೊಂಡ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅ. ೨೩ ರಂದು ರಾತ್ರಿ ೯ ಗಂಟೆಗೆ ನವಚೇತನ ಕ್ಲಬ್ ಪರಿಸರದಲ್ಲಿ ಘಟನೆ ನಡೆದಿದೆ. ಕ್ಲಬ್ನ ಕಾರ್ಯ ದರ್ಶಿಯಾದ ದೀಪಕ್ ಕ್ಲಬ್ನಲ್ಲಿದ್ದ ವೇಳೆ ಜಗದೀಶ್- ಜನಾರ್ದನ ಎಂಬಿವರು ಪರಸ್ಪರ ಹೊಡೆದಾಡಿಕೊಂಡಿದ್ದರು. ಕೂಡಲೇ ಅಲ್ಲಿಗೆ ತಲುಪಿ ಹೊಡೆದಾಟ ತಡೆಯಲು ಯತ್ನಿಸಿ ದಾಗ ಜನಾರ್ದನನ ಸಹೋದರ ಸತೀಶ್ ತಲುಪಿ ದೀಪಕ್ಗೆ ಚಾಕುನಿಂದ ಇರಿದುದಾಗಿ ದೂರಲಾಗಿದೆ.