ಕುಂಬಳೆ: ರಾತ್ರಿ ಮನೆಯಲ್ಲಿ ನಿದ್ರಿಸಿದ ವೃದ್ಧೆ ಬೆಳಿಗ್ಗೆ ವೇಳೆ ನಾಪತ್ತೆಯಾಗಿದ್ದು, ಶೋಧ ನಡೆಸಿದಾಗ ಸಾರ್ವಜನಿಕ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶೇಡಿಗುಡ್ಡೆ ಭಾಸ್ಕರ ನಗರ ನಿವಾಸಿ ಶೀನ ಮೂಲ್ಯರ ಪತ್ನಿ ಲೀಲಾವತಿ (೬೯) ಮೃತ ಮಹಿಳೆಯಾಗಿದ್ದಾರೆ. ಲೀಲಾವತಿ ಗುರುವಾರ ರಾತ್ರಿ ಮನೆಯಲ್ಲಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಅವರು ನಾಪತ್ತೆ ಯಾಗಿದ್ದರು. ಹುಡುಕಾಡುತ್ತಿದ್ದಂತೆ ಮನೆಯಿಂದ ಅಲ್ಪದೂರದ ಸಾರ್ವಜನಿಕ ಬಾವಿ ಬಳಿ ಟಾರ್ಚ್ ಪತ್ತೆಯಾಗಿದೆ. ಇದರಿಂದ ಬಾವಿಯಲ್ಲಿ ಶೋಧ ನಡೆಸಿದಾಗ ಮೃತದೇಹ ಕಂಡುಬಂದಿದೆ. ಕುಂಬಳೆ ಪೊಲೀಸ್ ಹಾಗೂ ನಾಗರಿಕರು ಸೇರಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಲೀಲಾವತಿ ಅಲ್ಪಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ.
ಮೃತರು ಪತಿ, ಮಕ್ಕಳಾದ ಸೀತಾರಾಮ, ಮುರಳೀಧರ, ಸೊಸೆಯಂದಿರಾದ ವಾರಿಜ, ವನಜ ಮೊದಲಾದವರನ್ನು ಅಗಲಿದ್ದಾರೆ.
ವೃದ್ಧೆ ಬಾವಿಗೆ ಹಾರಿ ಆತ್ಮಹತ್ಯೆ
Kulal news
1 Min Read