ಉಡುಪಿ(ಅ.೧೫) : ಕುಲಾಲ ಸಮಾಜ ಸುಧಾರಕ ಸಂಘ(ರಿ) ಕೋಟ ಹೋಬಳಿ ಇದರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಮೆಕ್ಕೆಕಟ್ಟುವಿನ ಗಾಂಧಿ ಸಭಾಭವನದಲ್ಲಿ ಅಕ್ಟೊಬರ್ 23ರಂದು ನಡೆಯಲಿದೆ.
ಕರ್ನಾಟಕ ರಾಜ್ಯ ಕುಂಬಾರ ಸಂಘ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸುನಿಲ್ ಶಿವ ಮೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ದ.ಕ ಜಿಲ್ಲಾಧ್ಯಕ್ಷ ಜಯೇಶ್ ಕುಲಾಲ್, ಉಪನ್ಯಾಸಕ ದುಗ್ಗಪ್ಪ ಕಜೆಕಾರು, ಪೆರ್ಡೂರು ಕುಂಬಾರರ ಗುಡಿಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಕುಲಾಲ್ ಬ್ರಹ್ಮಾವರ , ಕುಂದಾಪುರ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಕುಲಾಲ್ ಕೆದೂರು, ಮೆಕ್ಕೆಕಟ್ಟು ಕುಲಾಲ ಸಮಾಜ ಸುಧಾರಕ ಸಂಘದ ನಿಯೋಜಿತ ಅಧ್ಯಕ್ಷ ಈಶ್ವರ ಕುಲಾಲ್ ನೈಲಾಡಿ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಮಾಜದ ವಿವಿಧ ಸಾಧಕರಿಗೆ ಸನ್ಮಾನವೂ ನಡೆಯಲಿದೆ.