ಬಂಟ್ವಾಳ (ಅ. ೧೧): ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವವೇದಿಕೆ ಬಂಟ್ವಾಳ ಹಾಗೂ ಇದರ ಮಹಿಳಾ ಸಂಘದ ವತಿಯಿಂದ ಕುಲಾಲ ಕುಂಬಾರರ ಯುವ ಸಮ್ಮಿಲನ , ನೂತನ ಕಾರ್ಯಕಾರಿ ಮಂಡಳಿ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನವನ್ನು ಅಕ್ಟೊಬರ್ 23, ಆದಿತ್ಯವಾರ ಅಪರಾಹ್ನ ೨ಕ್ಕೆ ಪೊಸಳ್ಳಿ ಕುಲಾಲ ಸಮುದಾಯ ಭವನಲ್ಲಿ ಆಯೋಜಿಸಲಾಗಿದೆ.
ಕುಂಬಾರ ಸಮುದಾಯದ ಪ್ರಸಕ್ತ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಮತ್ತು ಭವಿಷ್ಯವನ್ನು ರೂಪಿಸಲು ಯುವ ಸಮ್ಮಿಲನವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ವೇದಿಕೆಯ ಸ್ಥಾಪಕ ಡಾ. ಅಣ್ಣಯ್ಯ ಕುಲಾಲ್ ಉದ್ಘಾಟಿಸಲಿದ್ದಾರೆ. ಬಂಟ್ವಾಳ ಯುವವೇದಿಕೆಯ ಅಧ್ಯಕ್ಷ ನಾರಾಯಣ ಪೆರ್ನೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವ ವೇದಿಕೆಯ ಮುಖಂಡರಾದ ತೇಜಸ್ವಿರಾಜ್, ಯಶೋಧ ಬಿ, ಜಯೇಶ್ ಗೋವಿಂದ್, ಮೋಹಿತ್ ಕುಲಾಲ್, ಅಶೋಕ್ ಕೂಳೂರು, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಬಂಟ್ವಾಳ ಅಬಕಾರಿ ಉಪನಿರೀಕ್ಷಕಿ ಕುಮಾರಿ ಸುಜಾತ ಮುಂತಾದವರು ಭಾಗವಹಿಸಲಿದ್ದಾರೆ.
ಇದೇ ವೇಳೆ ಸಮಾಜದ ಸಾಧಕರಿಗೆ ಸನ್ಮಾನ ಹಾಗೂ ಬ್ರಹ್ಮರ ಕೂಟ್ಲು ಶ್ರೀಮತಿ ಭಾರತಿ ಹಾಗು ಅವರ ಶಿಷ್ಯ ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.