ಸುರತ್ಕಲ್ (೦೬) : ಹೆತ್ತವರನ್ನು ಕಳಕೊಂಡು ವಯೋವೃದ್ಧರ ಆಶ್ರಯದಲ್ಲಿರುವ ಬಾಲಕಿಯ ಕುಟುಂಬಕ್ಕೆ ಸುರತ್ಕಲ್ ಕುಲಾಲ ಸಂಘದ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.
ಕೃಷ್ಣಾಪುರದಲ್ಲಿ ವಾಸವಿರುವ ಬಾಲಕಿ ರೀತಾ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದು, ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ತನ್ನ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. ಮನೆಯಲ್ಲಿ ದುಡಿಯುವವರಿಲ್ಲದೇ ಸಂಕಷ್ಟದಲ್ಲಿದ್ದು, ಈ ಕುಟುಂಬಕ್ಕೆ ಸುರತ್ಕಲ್ ಕುಲಾಲ ಸಂಘ ವತಿಯಿಂದ 17,000 ರೂ. ಧನ ಸಹಾಯ ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಸುಧಾಕರ್ ಕುಲಾಲ್ , ಉಪಾಧ್ಯಕ್ಷರಾದ ಹೂವಯ್ಯ, ಕಾರ್ಯದರ್ಶಿ ಸುಂದರ್, ಸದಸ್ಯರಾದ ದಿನಕರ್, ವಿನೋದ್, ಗಣೇಶ್ , ಸ್ಥಳೀಯರಾದ ಸಂಗೀತಾ ಶೆಟ್ಟಿ ಉಪಸ್ಥಿತರಿದ್ದರು.
ಸುರತ್ಕಲ್ ಕುಲಾಲ ಸಂಘದ ವತಿಯಿಂದ ಅನಾಥ ಬಾಲಕಿ ಕುಟುಂಬಕ್ಕೆ ಧನಸಹಾಯ
Kulal news
1 Min Read