ಮಂಗಳೂರು (ಅ.೦೫) : ಸುದೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅಮ್ಮೆ೦ಬಳ ವೀರಪ್ಪ ಮಾಸ್ಟರ್ (೭೮) ಅಲ್ಪ ಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾದರು. ನಾಲ್ಕು ದಶಕಗಳ ಕಾಲ ಆದರ್ಶ ಶಿಕ್ಷಕರಾಗಿ, ಅನೇಕ ಮಕ್ಕಳಿಗೆ ಶಿಕ್ಷಣ ದಾನ ಮಾಡಿದ, ಅನೇಕರಿಗೆ ಬುದ್ಧಿ ಮಾತು ಹೇಳುತ್ತಲೇ ಸರಿ ದಾರಿಗೆ ತಂದ ಸರಳ, ಸಜ್ಜನ, ಸ್ವಾಭಿಮಾನಿಯಾಗಿದ್ದ ಅವರು ಶಿಸ್ತಿಗೆ ಹೆಸರಾದವರು. ಕಷ್ಟ ಕಾರ್ಪಣ್ಯ ಹೇಳಿಕೊಂಡು ಬಂದವರಿಗೆ ಹೆಗಲು ಕೊಟ್ಟು ಆಸ್ತಿ, ಹಣದ ಹಿಂದೆ ಹೋಗದೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದವರು ವೀರಪ್ಪ ಮಾಸ್ಟರ್.
ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸೆ. 26ರಂದು ವಿಧಿವಶರಾದರು. ಇವರು ಪತ್ನಿ ಹಾಗೂ ಪುತ್ರಿ, ಪುತ್ರರಾದ ಪತ್ರಕರ್ತ ನವೀನ್
ಅಮ್ಮೆ೦ಬಳ, ಪ್ರವೀಣ್ ಅಮ್ಮೆ೦ಬಳ ಸಹಿತ ಅಪಾರ ಬಂಧು ಮಿತ್ರರು ಹಾಗೂ ಶಿಷ್ಯರನ್ನು ಬಿಟ್ಟು ಅಗಲಿದ್ದಾರೆ.
ಅಮ್ಮೆ೦ಬಳ ವೀರಪ್ಪ ಮಾಸ್ಟರ್ ನಿಧನ
Kulal news
1 Min Read