ಬೆಂಗಳೂರು : ಬಿಜೆಪಿ ಆರೋಗ್ಯ ಪ್ರಕೋಷ್ಠದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಹ ಸಂಚಾಲಕರಾಗಿ ಡಾ. ಅಣ್ಣಯ್ಯ ಕುಲಾಲ್ ಅಧಿಕಾರ ಸ್ವೀಕರಿಸಿದರು.
ರಾಷ್ಟ್ರೀಯ ವಕ್ತಾರ ಡಾ. ಸಂಭಾತ್ ಪಾತ್ರ ವೈದ್ಯಕೀಯ ಪ್ರಕೋಷ್ಠದ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನ ತಿಳಿಹೇಳಿದರು. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ವೈದ್ಯಕೀಯ ಪ್ರಕೋಷ್ಠದ ವೆಬ್ ಸೈಟ್ ಬಿಡುಗಡೆ ಮಾಡಿದರು.
ಮಾಜಿ ಸಚಿವರು ಗಳಾದ ಸಂಸದೆ ಶೋಭಾ ಕರಂದ್ಲಾಜೆ ಶಾಸಕ ಡಾ ಅಶ್ವಥ್ ನಾರಾಯಣ್ ರಾಜ್ಯಾ ಕಾರ್ಯದರ್ಶಿ ರವಿ ಕುಮಾರ ಹಾಗು ಕೇಶವ ಪ್ರಸಾದ್
ಮುಂತಾದವರ ಉಪಸ್ಥಿತಿಯಲ್ಲಿ ಡಾ ಬಸವ ರಾಜ್ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಹಾಗೂ ಡಾ ಪ್ರಶಾಂತ್ ಕಾಕೋಡ ರವರಿಗೆ ರಾಜ್ಯ ಸಂಚಾಲಕ ಹಾಗೂ ರಾಜ್ಯ ಸಹ ಸಂಚಾಲಕ ಜವಾಬ್ದಾರಿಯನ್ನ ನೀಡಲಾಯಿತು. ಅಲ್ಲದೆ ರಾಜ್ಯದ 30 ಜಿಲ್ಲೆ ಹಾಗು 230 ಮಂಡಲ/ವಿಧಾನ ಸಭಾ ಕ್ಷೇತ್ರಗಳಿಂದ ಬಂದ ಸಂಚಾಲಕರಿಗೆ ಪದಗ್ರಹಣ ಮಾಡಿಸಲಾಯಿತು.
ರಾಜ್ಯದ ಬಡವರಿಗೆ ಆಶಕ್ತರಿಗೆ ಈ ಪ್ರಕೋಷ್ಠದ ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಅರೋಗ್ಯ ಶಿಬಿರದ ಮೂಲಕ ಮೋದಿಯವರ ಕನಸನ್ನ ನನಸು ಮಾಡಲು ಸ್ವಚ್ಛತಾ ಆಂದೋಲನವನ್ನ ರಾಜ್ಯದ ಪ್ರತೀ ಮೂಲೆಗೂ ತಲುಪಿಸಲು ಪಣ ತೊಡಲಾಯಿತು.
ಬಿಜೆಪಿ ಆರೋಗ್ಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಡಾ. ಕುಲಾಲ್ ಅಧಿಕಾರ ಸ್ವೀಕಾರ
Kulal news
1 Min Read