ಪುತ್ತೂರು : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಬಲ್ನಾಡು ಗ್ರಾಮದ ಉಜ್ರುಪಾದೆ ಕೊಪ್ಪಳ ಗುರುವಪ್ಪ ಮೂಲ್ಯರ ಪುತ್ರ ದೇವಪ್ಪ ಕುಲಾಲ್(50) ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯದಿಂದ ಬಳಲುತ್ತಿದ್ದ ದೇವಪ್ಪರವರು ಆ.10ರಂದು ಪುತ್ತೂರಿಗೆ ಬಂದಿದ್ದರು. ಮನೆಗೆ ಬಂದು ಅವರು ಮನೆಯ ಜಗಲಿಯಲ್ಲಿ ಕುಳಿತುಕೊಂಡಿದ್ದು, ರಾತ್ರಿ ಊಟಕ್ಕೆ ಕರೆದರೂ ಬಾರದೇ ನಾಪತ್ತೆಯಾಗಿದ್ದರು. ಮರುದಿನ ಬೆಳಿಗ್ಗೆ 7.00 ಗಂಟೆಯ ಸಮಯಕ್ಕೆ ಗುಡ್ಡದಲ್ಲಿರುವ ಪುರಸಭೆಯ ನೀರಿನ ಟ್ಯಾಂಕಿನ ಬಳಿಯ ಅಕೇಸಿಯಾ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯ ಪಾನ ಮಾಡುವ ಚಟ ಹೊಂದಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ನೇಣು ಬಿಗಿದು ಬಲ್ನಾಡು ದೇವಪ್ಪ ಕುಲಾಲ್ ಆತ್ಮಹತ್ಯೆ
Kulal news
1 Min Read