ಮುಂಬಯಿ : ಇಲ್ಲಿನ ಕುಲಾಲ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಕುಲಾಲ ಸಮಾಜ ಬಾಂಧವರಿಗಾಗಿ “ಆಟಿದ ಒಂಜಿ ದಿನ” (ಆಹಾರೋತ್ಸವ) ಹಾಗು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭವು ಮಾಟು೦ಗಾ ವೆಸ್ಟ್ ನಲ್ಲಿರುವ ವಿಶ್ವೇಶ್ವರಯ್ಯ ಹಾಲ್’ನ ಸಮರಸ ಭವನದಲ್ಲಿ ಜುಲೈ ೩೧ರಂದು ನಡೆಯಿತು.
ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಸುರೇಶ್ ಗುಜರನ್, ಕುಲಾಲ ಸಂಘದ ಐದು ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯರಾದ ಸುರೇಖಾ ಆರ್. ಬಂಗೇರ, ಪುಷ್ಪಲತಾ ಸಾಲ್ಯಾನ್, ಇಂದಿರಾ ಆರ್. ಬಂಜನ್, ರೇಖಾ ಎ. ಮೂಲ್ಯ, ಪ್ರೇಮಾ ಎಲ್. ಮೂಲ್ಯ, ಮಹಿಳಾ ವಿಭಾಗದ ಕೋಶಾಧಿಕಾರಿ ಲತಾ ಎಸ್. ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.
ಶಾಂತಾ ಮೂಲ್ಯ, ರೇವತಿ ಮೂಲ್ಯ ಮತ್ತು ಲಲಿತಾ ಮೂಲ್ಯ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ ಅವರು ಆಟಿ ತಿಂಗಳ ಬಗ್ಗೆ ವಿವರಿಸಿದರು. ಚಂದ್ರಹಾಸ ಮೂಲ್ಯ ಮೀರಾರೋಡ್ ಮತ್ತು ಆಶಾ ಸಿ. ಮೂಲ್ಯ ಆಟಿ ಕಳಂಜ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ರಶ್ಮಿತಾ ಆರ್. ಬಂಗೇರ ಆಟಿಯ ತಿಂಡಿ-ತಿನಿಸುಗಳ ಬಗ್ಗೆ ಪಾಡ್ದನದ ಮೂಲಕ ಎಲ್ಲರ ಗಮನ ಸೆಳೆದರು. ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಮಾಲತಿ ಜಯ ಅಂಚನ್ ನಿರೂಪಿಸಿದರು. ಲತಾ ಮೂಲ್ಯ ವಂದಿಸಿದರು. ಸಭಿಕರ ಪರವಾಗಿ ಸಂಘದ ಉಪಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಕಾರ್ಯದರ್ಶಿ ಡಿ. ಐ. ಮೂಲ್ಯ, ಮಮತಾ ಗಿರೀಶ್ ಸಾಲ್ಯಾನ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸುಮಾರು 70ಕ್ಕೂ ಅಧಿಕ ಮಹಿಳೆಯರು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಅತಿಥಿ-ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಅಡುಗೆ ಸ್ಪರ್ಧೆಯ ಫಲಿತಾಂಶ:
ಸಿಹಿತಿಂಡಿ ವಿಭಾಗ: ನ್ಯಾಯವಾದಿ ಸವಿನಾ ಎಸ್. ಕುಲಾಲ್ ಪ್ರಥಮ, ಭಾರತಿ ಗೋರೆಗಾಂವ್ ದ್ವಿತೀಯ, ಸುಂದರಿ ಎ. ಬಂಗೇರ ತೃತೀಯ. ಅಡ್ಡೆ ವಿಭಾಗ: ರೇವತಿ ಅಸಲ್ಪ ಪ್ರಥಮ, ನಯನಾ ಬಂಗೇರ ಪೊವಾಯಿ ದ್ವಿತೀಯ, ಜ್ಯೋತಿ ಸೂರಜ್ ಹಾಂಡ ತೃತೀಯ.
ಚಟ್ನಿ ವಿಭಾಗ: ಪುಷ್ಪಲತಾ ವಿ. ಸಾಲ್ಯಾನ್ ಪ್ರಥಮ, ಸಾವಿತ್ರಿ ಬಿ. ಬಂಗೇರ ದ್ವಿತೀಯ, ಮಲ್ಲಿಕಾ ಪಿ. ಕುಲಾಲ್ ಪನ್ವೇಲ್ ತೃತೀಯ. ರಸ ವಿಭಾಗ: ಧನಲಕ್ಷ್ಮೀ ಬಂಜನ್ ದಾದರ್ ಪ್ರಥಮ, ವೇದಾವತಿ ಆರ್. ಕರ್ಕೇರ ದ್ವಿತೀಯ, ಆರತಿ ಕರುಣಾಕರ ಸಾಲ್ಯಾನ್ ಮಲಾಡ್. ತರಕಾರಿ ಪಲ್ಯ ವಿಭಾಗ: ಪ್ರಿಯಾ ದಯಾನಂದ್ ಮೂಲ್ಯ ಪ್ರಥಮ, ಸುಮಿತ್ರಾ ಮೂಲ್ಯ ಮಲಾಡ್ ದ್ವಿತೀಯ, ಮಮತಾ ಎಸ್. ಕುಲಾಲ್ ಪನ್ವೇಲ್ ತೃತೀಯ.