ಬಂಟ್ವಾಳ : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ನಗರ ಠಾಣಾ ವ್ಯಾಪ್ತಿಯ ನರಿಕೊಂಬು ಗ್ರಾಮದ ಕುರ್ಚಿಪಳ್ಳ ಎಂಬಲ್ಲಿ ನಡೆದಿದೆ.
ಮೃತರನ್ನು ಇಲ್ಲಿನ ನವಜೀವನ ವ್ಯಾಯಾಮ ಶಾಲಾ ಬಳಿ ನಿವಾಸಿ ಸುಂದರ ಮೂಲ್ಯ ಎಂಬವರ ಪುತ್ರ, ಪಿಗ್ಮಿ ಸಂಗ್ರಾಹಕ ಅಜಿತ್ ಕುಮಾರ್ (28) ಎಂದು ಹೆಸರಿಸಲಾಗಿದೆ.
ಗೋಳ್ತಮಜಲು ಗ್ರಾಮದ ಕಲ್ಲಡ್ಕದ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಇವರು ಸೋಮವಾರ ಸಂಜೆ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಅಡಚಣೆಯೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಆರ್ಥಿಕ ಅಡಚಣೆಯಿಂದ ಯುವಕ ನೇಣು ಬಿಗಿದು ಆತ್ಮಹತ್ಯೆ
Kulal news
1 Min Read