ಮುಂಬಯಿ : ಇತ್ತೀಚಿಗೆ ನಿಧನರಾದ ಕುಲಾಲ ಮುಖಂಡ ಕುಲಾಲ ಸಂಘ ಮುಂಬಯಿ ಇದರ ಗೌರವಾಧ್ಯಕ್ಷ ಪಿ. ಕೆ. ಸಾಲ್ಯಾನ್ ಅವರ ಆತ್ಮಕ್ಕೆ ಶಾಂತಿ ಕೋರಲು ಶ್ರದ್ಧಾಂಜಲಿ ಸಭೆಯನ್ನು ಜುಲೈ 28ರಂದು ಗುರುವಾರ ಸಂಜೆ 6-00 ಗಂಟೆಗೆ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಆಯೋಜಿಸಲಾಗಿದೆ.
ಮುಂಬಯಿಯ ಕನ್ನಡಿಗರಲ್ಲಿ ಹಿರಿಯರೆನಿಸಿಕೊಂಡಿರುವ ಮುದ್ರಣ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಆರತಿ ಪ್ರಿಂಟರ್ಸ್ ನ ಮಾಲೀಕ ಪಿ.ಕೆ. ಸಾಲ್ಯಾನ್ ಜುಲೈ 20 ರ ತಡರಾತ್ರಿ ನಿಧನ ಹೊಂದಿದ್ದರು. ಮೂಲತಃ ಮಂಗಳೂರಿನ ಅದ್ಯಪಾಡಿಯವರಾದ ಇವರು ಪ್ರಾರ್ಥಮಿಕ ಶಿಕ್ಷಣವನ್ನು ಬೊಕ್ಕಪಟ್ನದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಬಳಿಕ ಭವಿಷ್ಯ ಅರಸಿ ಮುಂಬಯಿಗೆ ತೆರಳಿದ್ದರು. 19 ವರ್ಷ ಕುಲಾಲ ಸಂಘದ ಅಧ್ಯಕ್ಷರಾಗಿದ್ದ ಅವರ ಆಡಳಿತವಧಿಯಲ್ಲಿ ಹಲವಾರು ಸಮಾಜಪರ ಸೇವೆಗಳು ರೂಪುಗೊಂಡಿದ್ದವು. ಕುಲಾಲ ಸಂಘ ಮುಂಬಯಿ ಆಶ್ರಯದಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಸಭೆಯಲ್ಲಿ ಸಾಲ್ಯಾನ್ ಅವರ ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಳ್ಳಲು ವಿನಂತಿಸಲಾಗಿದೆ.