ಓ ಚಿಟ್ಟೆ ಬಣ್ಣದ ಚಿಟ್ಟೆ !
ಬಾ ಚಿಟ್ಟೆ ನನ್ನಯ ಚಿಟ್ಟೆ
ನೂರಾರು ಬಣ್ಣ ನಿನಗೆ
ನಿನ್ನಲ್ಲೇ ಕಣ್ಣು ಎನಗೆ
ಓ ನನ್ನ ಚಿಟ್ಟೆಯೇ ಬಾ ನನ್ನ ಚಿಟ್ಟೆಯೇ !
ಬಾನಲ್ಲೇ ಹಾರುವೆ ನೀನು
ಭುವಿಯಿಂದ ನೋಡುವೆ ನಾನು
ಓ ನನ್ನ ಚಿಟ್ಟೆಯೇ ಬಾ ನನ್ನ ಚಿಟ್ಟೆಯೇ !
ಬರುವೆಯಾ ನೀನು ಮನೆಗೆ
ಆಡುವೆ ನಾನು ಜೊತೆಗೆ
ಓ ನನ್ನ ಚಿಟ್ಟೆಯೇ ಬಾ ನನ್ನ ಚಿಟ್ಟೆಯೇ !
* ಶ್ರೀದೇವಿ ಆರ್ ಕುಲಾಲ್