ಬೆಂಗಳೂರು(ನ.೧೬, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಭವಿಷ್ಯದ ಯುವ ನಾಯಕರನ್ನು ರೂಪಿಸುವ ಉದ್ದೇಶದಿಂದ ಪ್ರತಿಷ್ಠಿತ ದೈನಿಕಗಳಾದ ಟೈಮ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ಫೆಡರಲ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸ್ಪೀಕ್ ಫಾರ್ ಇಂಡಿಯಾ’ ಅಂತರ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಟಾಪ್ ೨೫ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹಾವೇರಿಯ ಪ್ರವೀಣ್ ಕುಂಬಾರ್ ಆಯ್ಕೆಯಾಗಿದ್ದಾರೆ.
ದ ಟೈಮ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ಫೆಡರಲ್ ಬ್ಯಾಂಕ್ ಸಹಯೋಗದಲ್ಲಿ ಪ್ರತಿವರ್ಷ ಅಂತರ ಕಾಲೇಜು ಚರ್ಚಾ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಭವಿಷ್ಯದ ಯುವ ನಾಯಕರನ್ನು ರೂಪಿಸುವ ದೇಶದ ಅತಿ ದೊಡ್ಡ ಚರ್ಚಾ ಸ್ಪರ್ಧೆ ಇದಾಗಿದೆ. ಸಮಕಾಲೀನ ವಿಚಾರಗಳ ಬಗ್ಗೆ ಯುವಜನತೆಯ ಅಭಿಪ್ರಾಯಗಳ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸುವ ಮತ್ತು ಪ್ರೋತ್ಸಾಹ ನೀಡುವ ಚರ್ಚಾ ಸ್ಪರ್ಧೆಯಾಗಿದೆ. ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲಿ ಚರ್ಚಾಗೋಷ್ಠಿ ನಡೆಸಲಾಗುತ್ತದೆ.
ಈ ವರ್ಷದ ಚರ್ಚಾಗೋಷ್ಠಿಯಲ್ಲಿ ಕುಂಬಾರ ಜನಾಂಗದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲುರಬಡ್ನಿಯ ಪ್ರವೀಣ ಕುಂಬಾರ ಅವರು ಕರ್ನಾಟಕ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಇವರು ಧಾರವಾಡದ ಸಿಎಸ್ಐ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಲೇ ತಮ್ಮ ಗಟ್ಟಿ ಧ್ವನಿಯನ್ನು ಎತ್ತಿ ಸಮಕಾಲೀನ ವಿಷಯಗಳ ಬಗ್ಗೆ ನಿರ್ಗಳವಾಗಿ ಚರ್ಚಿಸಿ ಕರ್ನಾಟಕದ ಅಗ್ರ 25 ಮಾತುಗಾರರಲ್ಲಿ ಒಬ್ಬರಾಗಿದ್ದಾರೆ.
ಇವರು ಅಂತಿಮ ಸುತ್ತನ್ನು ತಲುಪಲು ಮತ್ತು ಗೆಲ್ಲಲು ಮತದಾನದ ಅವಶ್ಯಕತೆ ಇದ್ದು, ಇವರಿಗೆ ಪ್ರೋತ್ಸಾಹ ಜೊತೆಗೆ, ಮತವನ್ನು ಚಲಾಯಿಸಿ ಅವರನ್ನು ಅಂತಿಮ ಸುತ್ತಿಗೆ ಮತ್ತು ಆಯ್ಕೆ ಮಾಡುವ ಹೊಣೆ ಸಮಾಜ ಬಾಂಧವರ ಮೇಲಿದೆ.
ನಾವು ಇಲ್ಲಿ ಮಾಡಬೇಕಾಗಿರುವುದು www.speakforindia.com ತಾಣಕ್ಕೆ ಲಾಗಿನ್ ಮಾಡಿ, ಇವರಿಗೆ ಮತವನ್ನು ಚಲಾಯಿಸಬೇಕು. ನೀವು ಮತ್ತು ನಿಮ್ಮ ಸ್ನೇಹಿತರಿಗೆ ತಿಳಿಸಿ, ಅವರಿಂದಲೂ ಮತ ಚಲಾಯಿಸಿ. ಈ ವೇದಿಕೆಯಿಂದ ದೇಶವೇ ತಲೆದೂಗುವ ಒಬ್ಬ ಅಪ್ರತಿಮ ವಾಗ್ಮಿಯಾಗಿ ನಮ್ಮ ಹುಡುಗ ಹೊರಹೊಮ್ಮಬಹುದು. ಹೆಚ್ಚಿನ ಮಾಹಿತಿಗೆ ಪ್ರವೀಣ್ ಕುಂಬಾರರವರನ್ನು (9611688649)ಸಂಪರ್ಕಿಸಬಹುದು.
ಮಾಹಿತಿ : ಕುಬೇರ ಕುಂಬಾರ್