ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡಬಿದ್ರೆ ಪುತ್ತಿಗೆ ಪದವು ಸಂಪಿಗೆ ನಗರ ನಿವಾಸಿ ರಕ್ಷಿತಾ ಕುಲಾಲ್ ಅವರಿಗೆ ಕಾಪು ಕುಲಾಲ ಯುವ ವೇದಿಕೆಯು ನೆರವಿನಹಸ್ತ ಚಾಚಿ ಮಾನವತೆ ಮೆರೆದಿದೆ.
ಕೂಲಿ ಕಾರ್ಮಿಕರಾದ ಮೂಡಬಿದಿರೆ ಪುತ್ತಿಗೆ ಪದವು ನಿವಾಸಿ ಚಂದು ಯಾನೆ ಚಂದ್ರಶೇಖರ ಅವರ ಪತ್ನಿ ರಕ್ಷಿತಾ ಕುಲಾಲ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇವರ ಚಿಂತಾಜನಕ ಸ್ಥಿತಿಯ ಕುರಿತು `ಕುಲಾಲ್ ವಲ್ಡ್ ಡಾಟ್ ಕಾಮ್’ ವಿಸ್ಕೃತ ವರದಿ ಪ್ರಕಟಿಸಿತ್ತು. ಈ ವರದಿಗೆ ತತಕ್ಷಣ ಸ್ಪಂದಿಸಿದ ಕಾಪು ಕುಲಾಲ ಯುವ ವೇದಿಕೆಯು ಬಡ ಕುಟುಂಬಕ್ಕೆಸಹಾಯಹಸ್ತ ಚಾಚುವ ಭರವಸೆಯನ್ನು ನೀಡಿತ್ತು. ಅದರಂತೆ ಸಹೃದಯಿ ದಾನಿಗಳ ಬೆಂಬಲದಿಂದ ಒಟ್ಟು 24,100 ರೂ. ಸಂಗ್ರಹಗೊಂಡಿತ್ತು. ಈ ಹಣವನ್ನು ಅ.28 ಭಾನುವಾರ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ನಾನಿಲ್ತಾರ್ ಮುಂಡ್ಕೂರು ಕುಲಾಲ ಯುವವೇದಿಕೆಯ ಅಧ್ಯಕ್ಷ ದೀಪಕ್ ಕುಲಾಲ್ ಬೆಳ್ಮಣ್, ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷ ಉದಯ ಕುಲಾಲ್ ಕಳತ್ತೂರು, ನಾನಿಲ್ತಾರ್ ಮುಂಡ್ಕೂರು ಕುಲಾಲ ಸಂಘದ ಸದಸ್ಯರು, ಸುರೇಶ್ ಡಿ ಕುಲಾಲ್ ಇನ್ನ, ಸಂತೋಷ್ ಕುಲಾಲ್ ಸಾಂತೂರುಕೊಪ್ಪಲ ಇನ್ನ, ಆಕಾಶ್ ಕುಲಾಲ್ ಕಡೆಗುಂಜ ಇನ್ನ ಮೊದಲಾದವರು ಉಪಸ್ಥಿತರಿದ್ದರು.