ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಕುಲಾಲ ಸಂಘದ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಪೈವಳಿಕೆ ಕುಲಾಲ ಸಮಾಜ ಮಂದಿರ ಮತ್ತು ಗುಡಿಕೈಗಾರಿಕಾ ಕೇಂದ್ರದ ಉದ್ಘಾಟನಾ ಸಮಾರಂಭವು ನವೆಂಬರ್ 9 ಮತ್ತು 10ರಂದು ನಡೆಯಲಿದೆ.
ಮಾಣಿಲ ಮೋಹನದಾಸ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಸಮಾರಂಭದಲ್ಲಿ ಪೈವಳಿಕೆ ಅರಮನೆಯ ರಂಗತ್ರೈ ಅರಸರು, ಕೇರಳ ಕಂದಾಯ ಸಚಿವ ಚಂದ್ರಶೇಖರ್, ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಸಹಿತ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಜಿಲ್ಲೆಯ ಕುಲಾಲ ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ.
ನವೆಂಬರ್ 9 ಮತ್ತು 10ರಂದು ಪೈವಳಿಕೆ ಕುಲಾಲ ಸಮಾಜ ಮಂದಿರ-ಗುಡಿಕೈಗಾರಿಕಾ ಕೇಂದ್ರ ಉದ್ಘಾಟನೆ
Kulal news
1 Min Read