ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ರಾಜ್ಯ ಕುಂಭ ವೈದ್ಯರ ಎರಡನೇ ವರ್ಷದ ಸ್ನೇಹ ಕೂಟವು ತುಮಕೂರಿನ ವಿವಾ ರೆಸಾರ್ಟ್ನಲ್ಲಿ ನವೆಂಬರ್ 18 ಆದಿತ್ಯವಾರದಂದು ನಡೆಯಲಿದೆ. ಇಲ್ಲಿಯ ಸಕ್ರೀಯ ವೈದ್ಯರುಗಳಾದ ಡಾ ತಿಮ್ಮರಾಜು ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕೂಟದಲ್ಲಿ ಡಾ. ವಿಜಯ್ ರಾಘವೇಂದ್ರ, ಡಾ. ಗೋಪಾಲ್ ,ಡಾ. ರಾಜಣ್ಣ ,ಡಾ. ಗಿರೀಶ್ ,ಡಾ. ರವಿಕುಮಾರ್ ,ಡಾ. ಮಂಜುನಾಥ್ ಮುಂತಾದವರ ತಂಡ ಭಾಗವಹಿಸಲಿದೆ.
ಕರ್ನಾಟಕದಲ್ಲಿ ಇರುವ ವೈದ್ಯರುಗಳಲ್ಲದೇ ಕೇರಳ ,ತಮಿಳುನಾಡು,ಆಂಧ್ರಪ್ರದೇಶ, ತೆಲಂಗಾಣ, ಮುಂಬೈ, ದೆಹಲಿ, ಗುಜರಾತ್, ದುಬೈ, ಮಲೇಶಿಯಾ, ಸಿಂಗಾಪುರ್, ಯುಕೆ, ಯುಎಸ್ ನಲ್ಲಿ ನೆಲೆ ನಿಂತಿರುವ ವೈದ್ಯರು ಭಾಗವಹಿಸುವ ನಿರೀಕ್ಷೆಗಳಿವೆ.
ಕರ್ನಾಟಕ ಮೂಲದ ದೇಶ-ವಿದೇಶ ಗಳಲ್ಲಿ ನೆಲೆ ನಿಂತಿರುವ ಕುಂಬಾರ ಸಮುದಾಯದ ಸುಮಾರು 200 ಕ್ಕೂ ಅಧಿಕ ಹಿರಿ-ಕಿರಿಯ, ಅಲೋಪತಿ, ಡೆಂಟಲ್, ಆಯುಷ್ ಮತ್ತು ಹೋಮಿಯೋಪತಿ ವೈದ್ಯರುಗಳ ಕೂಡುವಿಕೆಯಿಂದ ಎರಡು ವರ್ಷಗಳ ಹಿಂದೆ ಹುಟ್ಟಿ ಕೊಂಡ ಸಮಾನ ಮನಸ್ಕ ವೈದ್ಯರ ಹುಂಪು ಕರ್ನಾಟಕ ಕುಂಭ ವೈದ್ಯ ಕೂಟವಾಗಿದ್ದು, ಕಳೆದ ಬಾರಿ ಬೆಂಗಳೂರಿನ ಹೃದಯ ಭಾಗದ ಟೆನಿಸ್ ಕ್ಲಬ್ ನಲ್ಲಿ ರುಗಿದ ಪ್ರಥಮ ಸ್ನೇಹಕೂಟ ಭರ್ಜರಿ ಯಶಸ್ಸನ್ನ ಕಂಡಿತ್ತು . ಕರ್ನಾಟಕದಲ್ಲಿ ಇರುವ ವೈದ್ಯರು ಇಂಟರ್ನ್ಸ್ ಪೋಸ್ಟ್ ಗ್ರಾಜುಯೇಟ್ಸ್ DNB ಪದವೀಧರರು ಈ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕುಂಭ ವೈದ್ಯ ಕೂಟದ ರಾಜ್ಯ ಸಂಚಾಲಕರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದ್ದಾರೆ.