ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್ ವರದಿ): ನಗರದ ಬಿಜೈ ಪ್ರದೇಶದಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಮಂಗಳಾಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ 23ನೇ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಇದರ ನಾಸಿಕ್ ಬಿ. ಹೆಚ್. ಬಂಗೇರ ಸಭಾಭವನ, ಪೊಲೀಸ್ ಲೇನ್, ಮಂಗಳೂರು ಇಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಬಿ. ಇವರು ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಸದಸ್ಯರಿಗೆ ಶೇಖಡಾ 18 ಡಿವಿಡೆಂಡ್ ನೀಡಲಾಗುವುದೆಂದು ಹೇಳಿದರು.
ಇದೇ ವೇಳೆ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ವಿಧ್ಯಾ ಪ್ರೋತ್ಸಾಹ ಧನ ವಿತರಿಸಲಾಯಿತು. ನಿರ್ದೇಶಕರಾದ ಸದಾಶಿವ ಬಂಗೇರ ಕೆ. ಇವರು ಸ್ವಾಗತಿಸಿ, ರಾಜೇಂದ್ರ ಇವರು ವಂದಿಸಿದರು. ಕಾರ್ಯದರ್ಶಿ ಉದಯ ಆರ್ ಇವರು ಸಂಘದ ವಾರ್ಷಿಕ ವರದಿ ವಾಚಿಸಿದರು.
ಸಂಘದ ಉಪಾಧ್ಯಕ್ಷರಾದ ಎ. ಶ್ರೀನಿವಾಸ್, ನಿರ್ದೇಶಕರಾದ ಭೋಜ ಎಸ್.ಕುಲಾಲ್, ಎಂ.ಪಿ.ಬಂಗೇರ, ಗಂಗಾಧರ್ ಕೆ., ಜೀವನ್ ಕುಮಾರ್, ಶ್ರೀಮತಿ ನಳಿನಿ ಡಿ. ಹಾಗೂ ಶ್ರೀಮತಿ ಶಕುಂತಳಾ ನಾರಾಯಣ ಉಪಸ್ಥಿತರಿದ್ದರು.