ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್ ವರದಿ): ಕರಾವಳಿ ಕುಲಾಲ ಯುವ ವೇದಿಕೆ ಕಾರ್ಕಳ ಇವರ ಮುಂದಾಳುತ್ವದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಕಳ-ಉಡುಪಿ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ತ್ರಿಪದಿ ಕವಿ ಸರ್ವಜ್ಞ ವೃತ್ತದ ಉದ್ಘಾಟನೆಯು ಸೆ. 23, ಭಾನುವಾರದಂದು ನಡೆಯಲಿದೆ.
ಕುಕ್ಕುಂದೂರು ಗ್ರಾಮ ಪಂಚಾಯತ್ ಕಚೇರಿ ಎದುರು ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮಾಣಿಲ ಮೋಹನದಾಸ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದಾರೆ. ಕುಲಾಲ ಸಮುದಾಯದ ನಾಯಕರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ,ಡಾ ಎಂ ವಿ ಕುಲಾಲ್ ಕುಂದಾಪುರ, ತೇಜಸ್ವಿರಾಜ್, ಭೋಜ ಕುಲಾಲ್, ದಿವಾಕರ್ ಎಂ ಬಂಗೇರ, ಗೋಪಾಲ ಮೂಲ್ಯ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮವು ಕರಾವಳಿ ಕುಲಾಲ ಯುವ ವೇದಿಕೆ, ಕಾರ್ಕಳ ತಾಲೂಕು ಪಂಚಾಯತ್ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ವೃತ್ತ ಉದ್ಘಾಟನೆಗೂ ಮುನ್ನ ಬೃಹತ್ ಬೈಕ್ ಜಾಥಾ ನಡೆಯಲಿದೆ.