ಬಂಟ್ವಾಳ(ಆ.೧೪, ಕುಲಾಲ್ ವರ್ಲ್ಡ್.ಕಾಮ್): ಅವರು ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಅತಿಥಿ ಉಪನ್ಯಾಸಕಿ. ಜಿಯೋಲಜಿ ವಿಜ್ಞಾನದಲ್ಲಿ ಎಮ್.ಎಸ್ಸಿ ಪದವಿದರೆಯಾಗಿರುವ 23 ವರ್ಷದ ಪ್ರಚಂಡ ಪ್ರತಿಭೆಯ ಗಣಿ. ಮನೆಯ ಜವಬ್ದಾರಿಯನ್ನು ಹೊತ್ತು, ಕುಟುಂಬದ ಆಧಾರಸ್ಥಂಭವಾಗಿ ದುಡಿದು ಉನ್ನತವಾದುದನ್ನು ಸಾಧಿಸಬೇಕೆಂಬ ತಹತಹಿಕೆಯ ಈ ಯುವ ಉಪನ್ಯಾಸಕಿ ಕಿಡ್ನಿ ವೈಪಲ್ಯದ ದುರಂತಕ್ಕೆ ಇದೀಗ ಒಳಗಾಗಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವುದ ಪರಿಸ್ಥಿತಿಯ ಘೋರ ಅಣಕವೇ ಸರಿ..
ಹೌದು.. ಕುಲಾಲ ಸಮುದಾಯದ ಕಾಶಿ ಬಂಟ್ವಾಳ ವಿಟ್ಲದ ಕಸಬ ಗ್ರಾಮದ ಮೇಗಿನ ಪೇಟೆ ಮನೆಯ ಅಕ್ಷಯ ಎನ್ ಅವರು ನೇಮು ಮೂಲ್ಯ ಮತ್ತು ಕುಸುಮ ದಂಪತಿಯ ಮೂವರು ಮಕ್ಕಳಲ್ಲಿ ಎರಡನೆಯವರು.. ಚಿಕ್ಕಂದಿನಿಂದಲೇ ಪ್ರತಿಭೆಯ ಗಣಿಯಾಗಿ ಕಲಿಕೆ, ಸಹಪಠ್ಯ ಚಟುವಟಿಕೆಗಳಲ್ಲಿ ಸಾಧಕಿ ಎಂಬ ಹೆಗ್ಗಳಿಕೆಯನ್ನು ಪಡೆದು ಒಂದೊಂದೇ ಮೆಟ್ಟಲನ್ನೇರಿ ಎಮ್.ಎಸ್ಸಿ ಪದವಿ ಪಡೆದ ಇವರದ್ದು ಖಂಡಿತಾ ಸಣ್ಣ ಸಾಧನೆಯೇನಲ್ಲ.. ಬೀಡಿ ಚೆಕ್ಕಿಂಗ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ ಅಪ್ಪ ನೇಮೂ ಮೂಲ್ಯ ಅವರು ಮಗಳಿಗೆ ಉನ್ನತ ಶಿಕ್ಷಣ ನೀಡಿದ್ದೇ ತಮ್ಮ ಮಗಳು ನಮ್ಮ ಬದುಕಿಗೆ ಮುಂದೇ ಆಧಾರ ಆಗಬೇಕು ಎಂಬ ಹೆಬ್ಬಯಕೆಯಿಂದ. ಆ ಕನಸ್ಸನ್ನೆ ನನಸು ಮಾಡುವ ಜವಬ್ದಾರಿಯನ್ನು ಹೊತ್ತು ಇದೀಗಷ್ಟೇ ಶಿಕ್ಷಣ ಮುಗಿಸಿ ತಾತ್ಕಾಲಿಕ ಉಪನ್ಯಾಸಕಿಯಾಗಿ ದುಡಿಯುವ ಹೊತ್ತಿನಲ್ಲೇ ಅಕ್ಷಯ ಅವರಿಗೆ ಅನೀರೀಕ್ಷಿತ ಅವಘಡದಂತೆ ಎದುರಾಗಿದ್ದು ಕಿಡ್ನಿ ಸಮಸ್ಯೆ..
ಮಂಗಳೂರಿನ ಜ್ಯೋತಿಯಲ್ಲಿರುವ ಕೆ.ಎಮ್ ಸಿ ಆಸ್ಪತ್ರೆಯಲ್ಲಿ ಈಗಾಗಲೇ ನಾಲ್ಕು ಭಾರೀ ದಾಖಲಾಗಿ ಚಿಕಿತ್ಸೆಗೆ ಲಕ್ಷಾಂತರ ರೂ ವನ್ನು ಖರ್ಚು ಮಾಡಲಾಗಿದೆ. ಆದರೆ ಸಮಸ್ಯೆ ಬಗೆಹರಿಯದೇ ಇದೀಗ ಐದನೇ ಬಾರೀ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಹಣವಿಲ್ಲದೇ ಶಿಕ್ಷಕಿ ಸಮಾಜದ ಮುಂದೇ ನೆರವಾಗುವಿರಾ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ..
ಮದುವೆ ವಯಸ್ಸಿಗೆ ಬೆಳೆದು ನಿಂತಿರುವ ಅಕ್ಷತಾ ಅವರ ಅಕ್ಕ, ಕಾಲೇಜು ಕಲಿಯುತ್ತಿರುವ ತಮ್ಮ, ಗೃಹಿಣಿಯಾಗಿರುವ ಅಮ್ಮ, ಕಳೆದ ಮೂರು ವರ್ಷಗಳಿಂದ ತೀವ್ರ ತೆರನಾದ ಬೆನ್ನು ನೋವಿನ ಸಮಸ್ಯೆಯಿಂದ ಬಳಲಿ ಕೆಲಸವನ್ನು ಮಾಡಲಾಗದೇ ಮನೆಯಲ್ಲಿರುವ ಅಪ್ಪ ನೇಮು ಮೂಲ್ಯ ಕುಟುಂಬದ ಏಕೈಕ ಆಧಾರ ಎಂಬಂತೆ ಖಾಸಗಿ ಶಾಲೆಯಲ್ಲಿ ಉಪನ್ಯಾಸಕಿಯಾಗಿ ತಿಂಗಳಿಗೆ ಹನ್ನೊಂದು ಸಾವಿರ ದುಡಿಯುವ ಅಕ್ಕ ಅಕ್ಷತಾರವರದಾಗಿದೆ.
ಇನ್ನೂ ಇಪ್ಪತ್ತಮೂರರ ಹರೆಯದ ಅಕ್ಷಯ ಇವರಿಗೆ ಉನ್ನತ ಭವಿಷ್ಯ ಇರುವುದು ದಿಟ.. ಚಿಕಿತ್ಸೆಗೆ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮೊತ್ತ ತಗುಲಬಹುದೆಂಬ ವೈದ್ಯರ ಮಾತು. ಈಗಾಗಲೇ ಲಕ್ಷಾಂತರ ರೂ ಸಾಲ ಮಾಡಿರುವ ಈ ಕುಟುಂಬ ಇದೀಗ ಕೈ ಚೆಲ್ಲಿ ಸಹೃದಯಿ ದಾನಿಗಳಾದ ತಮ್ಮ ಮುಂದೇ ಸಹಾಯ ಮಾಡಿ ಎಂದು ಬೇಡಿಕೊಳ್ಳುತ್ತಿದೆ.
ಮಕ್ಕಳ ಬಾಳನ್ನು ಬೆಳಗಬೇಕಾದ ಶಿಕ್ಷಕಿಯ ಬಾಳೇ ಕಮರುತ್ತಿರುವುದು ವಿಧಿಯ ಅಣಕ.. ಅಂತಹ ಶಿಕ್ಷಕಿಯ ಬಾಳನ್ನು ಬೆಳಗುವ ನಂದಾ ದೀಪಗಳು ನಾವಾಗೋಣ.. ಚಿಕಿತ್ಸೆಗೆ ನಮ್ಮಿಂದಾದಷ್ಟು ಸಹಾಯ ಒದಗಿಸೋಣ.. ಬ್ಯಾಂಕ್ ವಿವರ ಇಂತಿದೆ.
NAME: AKSHATHA N(ಅಕ್ಕ)
BANK: SYNDICATE BANK
BRANCH: VITTAL
A/C NO: 014122 0014 0572
IFSC CODE: SYNB0000141
CONTACT: +917829698002
ಬರಹ: ಮಂಜುನಾಥ್ ಹಿಲಿಯಾಣ
ಚಿತ್ರ ಮಾಹಿತಿ: ಹೇಮಂತ್ ಕುಮಾರ್, ಕಿನ್ನಿಗೋಳಿ