ಬಂಟ್ವಾಳ (ಮಾರ್ಚ್-೨೮, ಕುಲಾಲ್ ವರ್ಲ್ಡ್ ನ್ಯೂಸ್): ಐದು ತಲೆಮಾರಿನ ಸಂಸಾರ ಹೊಂದಿದ್ದ ಬಿ.ಸಿ. ರೋಡ್ ಸಮೀಪದ ಅಜ್ಜಿಬೆಟ್ಟು ನಿವಾಸಿ ದಿ. ಶಿವಪ್ಪ ಮೂಲ್ಯ ಅವರ ಧರ್ಮಪತ್ನಿ ಕಲ್ಯಾಣಿ ಮೂಲ್ಯ (85) ಅವರು ಇಂದು ಸಾವನ್ನಪ್ಪಿದ್ದಾರೆ.
ಇಂದಿನವರೆಗೂ ಯಾರದೇ ಸಹಾಯ ಪಡೆಯದೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿ, ಉತ್ತಮ ಆರೋಗ್ಯದಿಂದ ಜೀವನ ನಡೆಸುತ್ತ ಕುಟುಂಬಕ್ಕೆ ಮಾದರಿಯಾಗಿದ್ದರು. ಒಂದು ತುಂಬಿದ ಕುಟುಂಬಕ್ಕೆ ಮಾದರಿಯಾಗಿದ್ದ ಅಜ್ಜಿಯ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಹಾಗೂ ಗ್ರಾಮದಲ್ಲಿ ಮೌನ ಆವರಿಸಿದೆ.
ಮೃತರು ಪುತ್ರ ಚಂದಪ್ಪ, ಪುತ್ರಿಯರಾದ ರೇವತಿ ಮತ್ತು ಕವಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಮೊಮ್ಮಗ ಧೀರಜ್ ಅವರು`ಕುಕ್ಕುಡು ಉಂಡರಪ್ಪೆ’ ಎಂದು ತಮಾಷೆಗಾಗಿ ಕೆಣಕಿ ತೆಗೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಶೇರ್ ಮಾಡಿದ್ದು, ಹಲವರಿಗೆ ಪರಿಚಿತರಾಗಿದ್ದರು.