ಕಾರ್ಕಳ(ಮಾ.೨೪, ಕುಲಾಲ್ ವರ್ಲ್ಡ್ ನ್ಯೂಸ್): ಕಾರ್ಕಳ ತಾಲೂಕು ಪಂಚಾಯತ್ ಕಚೇರಿ ಸಮೀಪ ನೂತನವಾಗಿ ನಿರ್ಮಾಣವಾಗುತ್ತಿರುವ ವೃತ್ತಕ್ಕೆ ದಾರ್ಶನಿಕ ಕವಿ ಸರ್ವಜ್ಞನ ನಾಮಕರಣ ಮಾಡಿ ಪುತ್ಥಳಿ ಸ್ಥಾಪಿಸುವ ಯೋಜನೆಗೆ ಗುದ್ದಲಿ ಪೂಜೆಯನ್ನು ಶಾಸಕ ಸುನಿಲ್ ಕುಮಾರ್ ಮಾರ್ಚ್ ೨೪ರಂದು ನೆರವೇರಿಸಿದರು.
ಈ ಸಂದರ್ಭ ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ರಾದ ಭೋಜ ಕುಲಾಲ್, ಗೌರವಾಧ್ಯಕ್ಷರಾದ ಎಚ್ ಡಿ ಕುಲಾಲ್, ಡಾ ಎಂ ಅಣ್ಣಯ್ಯ ಕುಲಾಲ್, ರಾಮ ಕುಲಾಲ್ ಪೆರ್ಡೂರು, ಸುನೀಲ್ ಮೂಲ್ಯ ಕಾಪು, ಸಂತೋಪ್ ಕುಲಾಲ್ ಹೊಸ್ಮಾರು ,ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ್ ಕೆ, ಹರಿಶ್ಚಂದ್ರ ಕುಲಾಲ್ , ದಿವಾಕರ್ ಬಂಗೇರ, ವಸಂತ ಕುಮಾರ್ ,ಸುರೇಂದ್ರ ಕುಲಾಲ್, ಹೃದಯ ಕುಲಾಲ್, ಸಂತೋಷ್ ಕುಲಾಲ್ ಹಾಗೂ ಸಂಘದ ಸರ್ವ ಸದಸ್ಯರು ಹಾಗೂ ಇತರ ಎಲ್ಲಾ ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.