ಹೆಬ್ರಿ(ಫೆ.೧೮,ಕುಲಾಲ್ ವರ್ಲ್ಡ್ ನ್ಯೂಸ್): ಕ್ಯಾನ್ಸರ್ ನಿಂದ ಬಳಲುತ್ತಿರುವ ಹೆಬ್ರಿಯ ಬಡ ಕುಟುಂಬದ ಬಾಲಕ ಪ್ರಾಣೇಶ್ ಗೆ `ಕುಲಾಲ ಚಾವಡಿ’ ವಾಟ್ಸಾಪ್ ಗ್ರೂಪಿನಿಂದ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು.
ಪ್ರಾಣೇಶನ ಅನಾರೋಗ್ಯದ ಕುರಿತಾಗಿ `ಕುಲಾಲ ಚಾವಡಿ’ ವಾಟ್ಸಾಪ್ ಬಳಗದ ಮೂಲಕ ಸಚಿತ್ರ ಮಾಹಿತಿ ನೀಡಿ `ಕಾರುಣ್ಯ ನಿಧಿ’ ಎಂಬ ಹೆಸರಲ್ಲಿ ಚಿಕಿತ್ಸೆಗೆ ಧನ ಸಹಾಯ ನೀಡಿ ಸಹಕರಿಸುವಂತೆ ವಿನಂತಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಹೃದಯಿ ಬಂಧುಗಳಿಂದ ಒಗ್ಗೂಡಿದ 23,050/- ರೂಪಾಯಿಯನ್ನು ವಾಟ್ಸಾಪ್ ಸದಸ್ಯರ ಸಮ್ಮುಖದಲ್ಲಿ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
ಸಹಾಯ ಧನ ಹಸ್ತಾಂತರ ಸಂದರ್ಭ `ಕುಲಾಲ ಚಾವಡಿ’ ಯ ಅಡ್ಮಿನ್ ಸಂತೋಷ್ ಕುಲಾಲ್ ಪದವು, `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಹೇಮಂತ್ ಕುಲಾಲ್ ಕಿನ್ನಿಗೋಳಿ, ಅರುಣ್ ಕುಲಾಲ್ ಮೂಳೂರು, ದಯಾನಂದ ಬಂಗೇರ ಮೂಡುಬಿದಿರೆ, ಬಿಂಬ ಪ್ರಕಾಶನದ ಮಾಲಕ ವಸಂತ ಕುಮಾರ್ ಬೆಳ್ತಂಗಡಿ, ಕುಲಾಲ ಚಾವಡಿಯ ಸದಸ್ಯರಾದ ರಮೇಶ್ ಕರಿಯಕಲ್ಲು , ಸತೀಶ್ ಕಜ್ಜೋಡಿ ಮೊದಲಾದವರು ಜತೆಗಿದ್ದರು. ಪ್ರಾಣೇಶ್ ಅವರಿಗೆ ಹೆಚ್ಚಿನ ನೆರವು ಒದಗಿಸುವ ಸಲುವಾಗಿ ಜಗದೀಶ್ ಕುಲಾಲ್ ಸಾಣೂರು ಅವರು ಊರ ಹಾಗೂ ಪರವೂರ ದಾನಿಗಳನ್ನು ಸಂಪರ್ಕಿಸಿ ಹೆಚ್ಚಿನ ಶ್ರಮ ವಹಿಸಿದ್ದರು.