ಬೆಳ್ತಂಗಡಿ(ಜ.೦೪, ಕುಲಾಲ್ ವರ್ಲ್ಡ್ ನ್ಯೂಸ್): ಬೆಳ್ತಂಗಡಿಯ ಕುಲಾಲ- ಕುಂಬಾರರ ಹಕ್ಕೊತ್ತಾಯ ಸಮಿತಿಯ ವತಿಯಿಂದ ಬೃಹತ್ ಕುಲಾಲ- ಕುಂಬಾರರ ಹಕ್ಕೊತ್ತಾಯ ಸಮಾವೇಶಕ್ಕೆ ಜನಸಾಗರೇ ಹರಿದು ಬಂದಿದ್ದು, ಅದ್ಧೂರಿ ಚಾಲನೆ ನೀಡಲಾಯಿತು.
ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ರವಿ ಎನ್ ಅವರು ದೀಪ ಬೆಳಗಿಸುವ ಮೂಲಕ ಸಮಾವೇಶ ಹಾಗು ಹಕ್ಕೊತ್ತಾಯಕ್ಕೆ ಚಾಲನೆ ನೀಡಿದರು.
ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರು ಇದರ ಅಧ್ಯಕ್ಷ ಶಿವ ಕುಮಾರ್ ಚೌಡಶೆಟ್ಟಿ, ಬೆಳ್ತಂಗಡಿ ಶಾಸಕ ವಸಂತ ಬಂಗೇರ, ಕಾಂಗ್ರೆಸ್ ಮುಖಂಡರಾದ ಬಿ ಕೆ ಹರಿಪ್ರಸಾದ್, ಪಿ.ವಿ. ಮೋಹನ್, ಬಿಜೆಪಿ ಮುಖಂಡ ಹರೀಶ್ ಪೂಂಜಾ, ದಕ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕುಂಬಾರ/ಕುಲಾಲ ಸಮಾಜದ ನಾಯಕರಾದ ಆರ್ ಶ್ರೀನಿವಾಸ್, ಡಾ. ವರ್ಷ, ಅನಿಲ್ ದಾಸ್, ಸುಜಿರ್ ಕುಡುಪು, ತೇಜಸ್ವಿರಾಜ್, ಡಾ. ಅಣ್ಣಯ್ಯ ಕುಲಾಲ್, ಹರೀಶ್ ಕಾರಿಂಜ ಮೊದಲಾದವರು ಉಪಸ್ಥಿತರಿದ್ದರು.