ಕುಂಬಾರರು ಸೇರಿದಂತೆ ಅತಿ ಹಿಂದುಳಿದ ಸಮುದಾಯಗಳು ಸಂವಿಧಾನದ ಮಹತ್ವ ಮತ್ತು ಹಕ್ಕುಗಳ ಕುರಿತು ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಹೇಳಿದ್ದಾರೆ. ಕುಂಬಾರ ಜಾಗೃತ ವೇದಿಕೆ, ಅಖಿಲ ಕರ್ನಾಟಕ ಕುಂಬೇಶ್ವರ ಸೇವಾ ಟ್ರಸ್ಟ್ ವತಿಯಿಂದ ನಗರದ ರೈತಸಭಾಂಗಣದಲ್ಲಿ ರವಿವಾರ ನಡೆದ ಕುಂಬಾರರ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಪ್ರೊ.ಲಕ್ಷ್ಮೀಸಾಗರ್ ಅವರ ಹೆಸರಲ್ಲಿ ಕೊಡಮಾಡಲಾದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.